ಸಾರಾಂಶ
ಇಂಡೋನೇಷ್ಯಾ ಮಾಸ್ಟರ್ಸ್ 500 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಎಚ್.ಎಸ್. ಪ್ರಣಯ್ ಭಾರತ ಸವಾಲನ್ನು ಮುನ್ನಡೆಸಲಿದ್ದಾರೆ.
ಜಕಾರ್ತ: ಇಂಡೋನೇಷ್ಯಾ ಮಾಸ್ಟರ್ಸ್ 500 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಎಚ್.ಎಸ್. ಪ್ರಣಯ್ ಭಾರತ ಸವಾಲನ್ನು ಮುನ್ನಡೆಸಲಿದ್ದಾರೆ. ಲಕ್ಷ್ಯ ಸೇನ್, ಕಿದಂಬಿ ಶ್ರೀಕಾಂತ್, ಪ್ರಿಯಾನ್ಶು ರಾಜಾವತ್ ಕೂಡಾ ಕಣದಲ್ಲಿದ್ದಾರೆ. ಆದರೆ ಸತತ ಟೂರ್ನಿಗಳ ಒತ್ತಡದಿಂದಾಗಿ ತಾರಾ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಮಹಿಳಾ ಡಬಲ್ಸ್, ಮಿಶ್ರ ಡಬಲ್ಸ್‌ನಲ್ಲಿ
ಭಾರತದ ಯಾವುದೇ ಸ್ಪರ್ಧಿಗಳಿಲ್ಲ. ಮುಂಬೈ ಮ್ಯಾರಥಾನ್: ಕುಸಿದು ಬಿದ್ದು 2 ಸಾವುಮುಂಬೈ: ಭಾನುವಾರ ನಡೆದ ಮುಂಬೈ ಮಾರಥಾನ್ ವೇಳೆ ಕುಸಿದು ಬಿದ್ದು ಇಬ್ಬರು ಮೃತಪಟ್ಟಿದ್ದು, 22 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಲ್ಕತಾದ ಸುವ್ರದೀಪ್ ಬ್ಯಾನರ್ಜಿ(40), ಮುಂಬೈನ ರಾಜೇಂದ್ರ ಬೋರಾ (74) ಕುಸಿದು ಬಿದ್ದು ಮೃತಪಟ್ಟಿವರು. 22 ಜನ ನಿರ್ಜಲೀಕರಣದಿಂದ ಆಸ್ಪತ್ರೆ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.