ಸಾರಾಂಶ
ಭಾರತದ ತಾರಾ ಬ್ಯಾಡ್ಮಿಂಟನ್ ಆಟಗಾರರಾದ ಇಂಡೋನೆಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಲಕ್ಷ್ಯ ಸೇನ್, ಕಿರಣ್ ಜಾರ್ಜ್ ಶುಭಾರಂಭ ಮಾಡಿದ್ದು, ಎಚ್.ಎಸ್ ಪ್ರಣಯ್ ಹಾಗೂ ಕಿದಂಬಿ ಶ್ರೀಕಾಂತ್ ಆರಂಭಿಕ ಸುತ್ತಿನಲ್ಲೇ ಸೋಲು ಎದುರಾಗಿದೆ.
ಜಕಾರ್ತ: ಇಲ್ಲಿ ನಡೆಯುತ್ತಿರುವ ಇಂಡೋನೆಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಎಚ್.ಎಸ್ ಪ್ರಣಯ್ ಹಾಗೂ ಕಿದಂಬಿ ಶ್ರೀಕಾಂತ್ ಆರಂಭಿಕ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಲಕ್ಷ್ಯ ಸೇನ್, ಕಿರಣ್ ಜಾರ್ಜ್ ಶುಭಾರಂಭ ಮಾಡಿದರು. ಸೇನ್ ಪುರುಷರ ಸಿಂಗಲ್ಸ್‌ನಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ ವಿರುದ್ಧ 24-22, 21-15ರಿಂದ ಗೆದ್ದರೆ, ಕಿರಣ್ ಫ್ರಾನ್ಸ್‌ನ ತೊಮಾ ಜ್ಯೂನಿಯರ್ ಪೊಪೊವ್ ವಿರುದ್ಧ 18-21, 21-16, 21-19ರಲ್ಲಿ ಜಯಿಸಿದರು. ಇಂಡಿಯಾ ಓಪನ್ ಟೂರ್ನಿಯಲ್ಲಿ ಸೆಮೀಸ್‌ಗೇರಿದ್ದ ಪ್ರಣಯ್ ಸಿಂಗಪೂರ್‌ನ ಲೊಹ್ ಕಿಯಾನ್ ವ್ಯೂಗೆ ಪ್ರಬಲ ಪೈಪೋಟಿ ನೀಡಿದ ಹೊರತಾಗಿಯೂ 18-21, 21-19, 10-21ರಿಂದ ಶರಣಾದರು. ಶ್ರೀಕಾಂತ್ ಮಲೇಷ್ಯಾದ ಲೀ ಝಿ ಜಿಯಾ ವಿರುದ್ಧ 21-19 14-21 11-21ರಿಂದ ಸೋಲನುಭವಿಸಿದರು.