ಇಂಡೋನೆಷ್ಯಾ ಮಾಸ್ಟರ್ಸ್‌: ಸೇನ್‌, ಪ್ರಿಯಾನ್ಶುಗೆ ಸೋಲು

| Published : Jan 26 2024, 01:48 AM IST

ಇಂಡೋನೆಷ್ಯಾ ಮಾಸ್ಟರ್ಸ್‌: ಸೇನ್‌, ಪ್ರಿಯಾನ್ಶುಗೆ ಸೋಲು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರರಾದ ಲಕ್ಷ್ಯ ಸೇನ್‌ ಹಾಗೂ ಪ್ರಿಯಾಂನ್ಶು ರಾಜಾವತ್‌ ಇಂಡೋನೆಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ.

ಜಕಾರ್ತ: ಭಾರತದ ತಾರಾ ಬ್ಯಾಡ್ಮಿಂಟನ್‌ ಆಟಗಾರರಾದ ಲಕ್ಷ್ಯ ಸೇನ್‌ ಹಾಗೂ ಪ್ರಿಯಾಂನ್ಶು ರಾಜಾವತ್‌ ಇಂಡೋನೆಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಪಂದ್ಯಾವಳಿಯಿಂದ ಹೊರಬಿದ್ದಿದ್ದಾರೆ. ಗುರುವಾರ ನಡೆದ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯಗಳಲ್ಲಿ ಡೆನ್ಮಾರ್ಕನ್‌ ಆ್ಯಂಡೆರ್ಸ್‌ ಆ್ಯಂಟನ್ಸನ್‌ ಪ್ರಬಲ ಪೈಪೋಟಿ ನೀಡಿದ ಸೇನ್‌, 19-21, 18-21ರಿಂದ ಶರಣಾದರು. ಮತ್ತೊಂದು ಪಂದ್ಯದಲ್ಲಿ ರಾಜಾವತ್‌ ಕೆನಡಾ ಬ್ರಿಯಾನ್‌ ಯಂಗ್‌ ವಿರುದ್ಧ 21-18, 21-14ರಿಂದ ಸೋಲೊಪ್ಪಿಕೊಂಡರು. ಇದೇ ವೇಳೆ ಕಿರಣ್‌ ಜಾರ್ಜ್‌ ಗೆದ್ದು 3ನೇ ಸುತ್ತಿಗೇರಿದರು2ನೇ ಟೆಸ್ಟ್‌: ವಿಂಡೀಸ್‌

ಮೊದಲ ದಿನ 266/8

ಬ್ರಿಸ್ಬೆನ್‌: ಆಸ್ಟ್ರೇಲಿಯಾ ವಿರುದ್ಧದ 2 ಟೆಸ್ಟ್ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ವೆಸ್ಟ್‌ ಇಂಡೀಸ್‌, ಕೆವೆಮ್‌ ಹಾಡ್ಜ್‌ (79) ಮತ್ತು ಜೋಶುವಾ ಡಿ ಸಿಲ್ವಾ(71) ಅವರ ಅರ್ಧಶತಕ ನೆರವಿನಿಂದ ಮೊದಲ ದಿನದಂತ್ಯಕ್ಕೆ 89.4 ಓವರ್‌ಗಳಲ್ಲಿ 8 ವಿಕೆಟ್‌ಗೆ 266 ರನ್‌ ಗಳಿಸಿದೆ. ಟೆಸ್ಟ್‌ ಪಾದಾರ್ಪಣೆ ಮಾಡಿರುವ ಕೆವಿನ್‌ ಸಿಂಕ್ಲೈರ್‌ 16 ರನ್‌ ಗಳಿಸಿ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ಪರ ಮಿಚೆಲ್‌ ಸ್ಟಾರ್ಕ್‌ 4 ವಿಕೆಟ್‌ ಪಡೆದು ಮಿಂಚಿದರು.