ಗಾಯಾಳು ಬೂಮ್ರಾ ಇಂಗ್ಲೆಂಡ್‌ ಸರಣಿಗೆ ಅನುಮಾನ: ಚಾಂಪಿಯನ್ಸ್‌ ಟ್ರೋಫಿಗೆ ಫಿಟ್‌ ಆಗ್ತಾರಾ?

| Published : Jan 07 2025, 12:31 AM IST / Updated: Jan 07 2025, 04:08 AM IST

ಸಾರಾಂಶ

ಒಂದು ವೇಳೆ ಗಾಯದ ಪ್ರಮಾಣ ಸಣ್ಣದಿದ್ದರೆ ಕನಿಷ್ಠ 2-3 ವಾರ, ಗಾಯ ಹೆಚ್ಚಿದ್ದರೆ ಕನಿಷ್ಠ 3 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ.

ಸಿಡ್ನಿ: ಭಾರತದ ತಾರಾ ವೇಗಿ ಜಸ್‌ಪ್ರೀತ್‌ ಬೂಮ್ರಾ ಬೆನ್ನು ನೋವಿಗೆ ತುತ್ತಾಗಿದ್ದು, ಇಂಗ್ಲೆಂಡ್‌ ವಿರುದ್ಧ ತವರಿನ ಸರಣಿಯ ಬಹುತೇಕ ಪಂದ್ಯಗಳಿಗೆ ಗೈರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಆಸ್ಟ್ರೇಲಿಯಾ ಸರಣಿಯಲ್ಲಿ 32 ವಿಕೆಟ್‌ ಪಡೆದಿರುವ ಬೂಮ್ರಾ, ಕೊನೆ ಟೆಸ್ಟ್‌ನ ದಿನ ಬೆನ್ನು ನೋವಿನಿಂದಾಗಿ ಮೈದಾನ ತೊರೆದಿದ್ದರು. ಅವರು ಕೊನೆ ದಿನ ಬೌಲ್‌ ಮಾಡಿರಲಿಲ್ಲ. ಸದ್ಯದ ವರದಿ ಪ್ರಕಾರ, ಬೂಮ್ರಾ ಗಾಯದ ಪ್ರಮಾಣ ಎಷ್ಟಿದೆ ಎಂಬುದು ಇನ್ನೂ ಖಚಿತವಾಗಿಲ್ಲ. ಅವರ ಮೇಲೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ಇಟ್ಟಿದೆ. ಒಂದು ವೇಳೆ ಗಾಯದ ಪ್ರಮಾಣ ಸಣ್ಣದಿದ್ದರೆ ಕನಿಷ್ಠ 2-3 ವಾರ, ಗಾಯ ಹೆಚ್ಚಿದ್ದರೆ ಕನಿಷ್ಠ 3 ತಿಂಗಳು ಕ್ರಿಕೆಟ್‌ನಿಂದ ದೂರ ಉಳಿಯಬೇಕಾಗುತ್ತದೆ.

ಇಂಗ್ಲೆಂಡ್‌ ಸರಣಿ ಜ.22ರಿಂದ ಆರಂಭಗೊಳ್ಳಲಿದ್ದು, 5 ಟಿ20, 3 ಏಕದಿನ ಪಂದ್ಯಗಳು ನಡೆಯಲಿವೆ. ಈ ಸರಣಿಯಲ್ಲಿ ಬೂಮ್ರಾ ಆಡುವ ಸಾಧ್ಯತೆಯಿಲ್ಲ. ಗಾಯ ಹೆಚ್ಚಿಲ್ಲದಿದ್ದರೆ ಅವರು ಫೆ.19ರಿಂದ ಆರಂಭಗೊಳ್ಳಲಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಫಿಟ್‌ ಆಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.