ಸಾರಾಂಶ
ಟೂರ್ನಿಯ 1 ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಮತ್ತೊಂದು ಕ್ವಾಲಿಫೈಯರ್ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ನವದೆಹಲಿ: 17ನೇ ಆವೃತ್ತಿ ಐಪಿಎಲ್ ಫೈನಲ್ ಪಂದ್ಯ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಮೇ 26ಕ್ಕೆ ನಡಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಟೂರ್ನಿಯ 1 ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯ ವಹಿಸಲಿದ್ದು, ಮತ್ತೊಂದು ಕ್ವಾಲಿಫೈಯರ್ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಸದ್ಯ ಬಿಸಿಸಿಐ ಟೂರ್ನಿಯ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಪ್ರಕಟಿಸಿದ್ದು, ಇತರ ಪಂದ್ಯಗಳ ವೇಳಾಪಟ್ಟಿಯಲ್ಲಿ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದೆ.ಐಪಿಎಲ್: ರಿಂಕು ಸೇರಿ ನಾಲ್ವರ ವೇತನ ಹೆಚ್ಚಳ
ನವದೆಹಲಿ: ಐಪಿಎಲ್‌ನಲ್ಲಿ ಆಡುತ್ತಿರುವ ಭಾರತದ ಐವರು ಯುವ ಆಟಗಾರರ ವೇತನ ಹೆಚ್ಚಳವಾಗಲಿದೆ. ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದಾಗ ಇನ್ನೂ ಭಾರತ ತಂಡದ ಪರ ಆಡದೆ, ಆ ಬಳಿಕ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಆಟಗಾರರಿಗೆ ವೇತನ ಹೆಚ್ಚಳಗೊಳ್ಳಲಿದೆ. ಈ ನಿಯಮದ ಪ್ರಕಾರ ರಿಂಕು ಸಿಂಗ್, ಜಿತೇಶ್ ಶರ್ಮಾ, ಸಾಯಿ ಸುದರ್ಶನ್ ಹಾಗೂ ರಜತ್ ಪಾಟೀದಾರ್‌ರ ವೇತನವನ್ನು ಬಿಸಿಸಿಐ ಪರಿಷ್ಕರಿಸಲಿದೆ. 55 ಲಕ್ಷ ರು. ವೇತನ ಪಡೆಯುತ್ತಿರುವ ರಿಂಕುಗೆ 1 ಕೋಟಿ ರು. ಸಿಗಲಿದ್ದು, ತಲಾ 20 ಲಕ್ಷ ರು. ಗಳಿಸುತ್ತಿರುವ ಉಳಿದ ಮೂವರ ವೇತನ 50 ಲಕ್ಷ ರು.ಗೆ ಹೆಚ್ಚಳಗೊಳ್ಳಲಿದೆ.;Resize=(128,128))
;Resize=(128,128))