ಪ್ಲೇ-ಆಫ್‌ರೇಸ್‌ನಲ್ಲಿ ಇಂದು ಕೆಕೆಆರ್‌ vs ಲಖನೌ ಫೈಟ್‌

| Published : May 05 2024, 02:01 AM IST / Updated: May 05 2024, 04:37 AM IST

ಸಾರಾಂಶ

ಗೆಲ್ಲುವ ತಂಡದ ನಾಕೌಟ್ ಹಾದಿ ಮತ್ತಷ್ಟು ಸುಗಮ. ಎರಡೂ ತಂಡಗಳಿಗೆ ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದು ಎನಿಸಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ಲಖನೌ: ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಪ್ರವೇಶಿಸುವ ನೆಚ್ಚಿನ ತಂಡಗಳು ಎಂದೇ ಕರೆಸಿಕೊಳ್ಳುವ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ಭಾನುವಾರ ಪರಸ್ಪರ ಸೆಣಸಾಡಲಿವೆ. ಎರಡೂ ತಂಡಗಳಿಗೆ ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದು ಎನಿಸಿದ್ದು, ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.ಕೋಲ್ಕತಾ 10ರಲ್ಲಿ 7 ಪಂದ್ಯ ಗೆದ್ದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ. 

ಈ ಪಂದ್ಯದಲ್ಲಿ ಗೆದ್ದರೆ ತಂಡದ ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತವಾಗಲಿದ್ದು, ತಂಡದ ನೆಟ್‌ ರನ್‌ರೇಟ್‌ ಕೂಡಾ ಉತ್ತಮವಾಗಿರುವುದರಿಂದ ಅಂಕಪಟ್ಟಿಯಲ್ಲಿ ರಾಜಸ್ಥಾನವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲಿದೆ. ಅಲ್ಲದೆ ಕಳೆದ ಮುಖಾಮುಖಿಯಲ್ಲಿ ಲಖನೌವನ್ನು ಮಣಿಸಿದ್ದ ಕೆಕೆಆರ್‌, ಮತ್ತೊಂದು ಜಯದ ಕಾತರದಲ್ಲಿದೆ. 

ಅತ್ತ ಲಖನೌ ಕೂಡಾ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಆಡಿರುವ 10ರಲ್ಲಿ 6 ಪಂದ್ಯಗಳನ್ನು ಗೆದ್ದಿದೆ. ತಂಡ ಸದ್ಯ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಲೀಗ್‌ ಪಂದ್ಯಗಳು ಮುಕ್ತಾಯಗೊಳ್ಳುವ ಹಂತಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಈ ಪಂದ್ಯ ಗೆದ್ದು ಪ್ಲೇ-ಆಫ್‌ಗೆ ಹತ್ತಿರುವಾಗುವುದರ ಜೊತೆಗೆ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

ಒಟ್ಟು ಮುಖಾಮುಖಿ: 04

ಕೆಕೆಆರ್‌: 01ಲಖನೌ: 03

ಸಂಭವನೀಯರ ಪಟ್ಟಿ

ಕೆಕೆಆರ್‌: ಸಾಲ್ಟ್‌, ನರೈನ್‌, ರಘುವಂಶಿ, ಶ್ರೇಯಸ್‌(ನಾಯಕ), ವೆಂಕಟೇಶ್‌, ರಿಂಕು, ರಸೆಲ್‌, ರಮನ್‌ದೀಪ್‌, ಸ್ಟಾರ್ಕ್‌, ಹರ್ಷಿತ್‌, ಚಕ್ರವರ್ತಿ.ಲಖನೌ: ರಾಹುಲ್‌(ನಾಯಕ), ಸ್ಟೋಯ್ನಿಸ್‌, ಹೂಡಾ, ಪೂರನ್‌, ಟರ್ನರ್‌, ಬದೋನಿ, ಕೃನಾಲ್‌, ಬಿಷ್ಣೋಯ್‌, ನವೀನ್‌, ಮೊಹ್ಸಿನ್‌, ಯಶ್‌.

ಪಂದ್ಯ: ಸಂಜೆ 7.30ಕ್ಕೆ