ಸಾರಾಂಶ
ಹೊಸದಾಗಿ ಪರಿಚಯಿಸಲಿರುವ ಸ್ಮಾರ್ಟ್ ರಿವ್ಯೂ ವೇಗದ ಜೊತೆಗೆ ನಿಖರ ತೀರ್ಪನ್ನು ಪ್ರಕಟಿಸಲು ಸಹಕಾರಿಯಾಗಲಿದೆ. ಈ ಮೂಲಕ ಪಂದ್ಯದಲ್ಲಿ ಸಣ್ಣ ಮಟ್ಟಿನ ಬದಲಾವಣೆಗೆ ಬಿಸಿಸಿಐ ನಾಂದಿ ಹಾಡಿದೆ.
ನವದೆಹಲಿ: ಈ ಬಾರಿ ಐಪಿಎಲ್‌ನಲ್ಲಿ ಅಂಪೈರ್ ತೀರ್ಪು ಮೇಲ್ಮನವಿ ವ್ಯವಸ್ಥೆ(ಡಿಆರ್‌ಎಸ್)ಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಬಿಸಿಸಿಐ ಯೋಜನೆ ರೂಪಿಸಿದ್ದು, ಟೂರ್ನಿಯಲ್ಲಿ ಸ್ಮಾರ್ಟ್ ರಿವ್ಯೂ ವ್ಯವಸ್ಥೆ ಜಾರಿಗೊಳಿಸಲಿದೆ. ಇದು ವೇಗದ ಜೊತೆಗೆ ನಿಖರವಾಗಿ ತೀರ್ಪನ್ನು ಪ್ರಕಟಿಸಲು ಸಹಕಾರಿಯಾಗಲಿದೆ. ಸ್ಮಾರ್ಟ್ ರಿವ್ಯೂನಲ್ಲಿ ಹಾಕ್-ಐ ವ್ಯವಸ್ಥೆ ನೋಡಿಕೊಳ್ಳುವವರು ಟಿವಿ ಅಂಪೈರ್‌ಗಳಿಂದ ನೇರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಅಲ್ಲದೆ ಮೈದಾನದ ವಿವಿಧೆಡೆ 8 ಹೈ ಸ್ಪೀಡ್ ಕ್ಯಾಮರಾಗಳನ್ನು ಅಳವಡಿಸಲಿದ್ದು, ಅದರಲ್ಲಿ ಸೆರೆ ಹಿಡಿಯಲಾದ ಫೋಟೋಗಳನ್ನು ಪರಿಶೀಲಿಸಿ ಕ್ಯಾಚ್, ಎಲ್‌ಬಿಡಬ್ಲ್ಯು, ಸ್ಟಂಪ್ ಔಟ್‌ಗಳ ತೀರ್ಪುಗಳನ್ನು ನೀಡಲಿದ್ದಾರೆ.ಡೆಲ್ಲಿಗೆ ಪಂತ್ ನಾಯಕ
ನವದೆಹಲಿ: 2024ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ರಿಷಭ್ ಪಂತ್ ಮುನ್ನಡೆಸಲಿದ್ದಾರೆ. 2023ರ ಡಿಸೆಂಬರ್‌ನಲ್ಲಿ ಕಾರು ಅಪಘಾತಕ್ಕೀಡಾಗಿ 14 ತಿಂಗಳು ಕ್ರಿಕೆಟ್‌ನಿಂದ ಪಂತ್ ದೂರವಿದ್ದರು. ಕಳೆದ ವರ್ಷ ಐಪಿಎಲ್‌ನಲ್ಲಿ ತಂಡವನ್ನು ಡೇವಿಡ್ ವಾರ್ನರ್ ಮುನ್ನಡೆಸಿದ್ದರು.ಬ್ಯಾಡ್ಮಿಂಟನ್: ಲಕ್ಷ್ಯ ವಿಶ್ವ ನಂ.13ನವದೆಹಲಿ: ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್ ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ರ್‍ಯಾಂಕಿಂಗ್‌ನಲ್ಲಿ 5 ಸ್ಥಾನ ಮೇಲೇರಿ 13ನೇ ಸ್ಥಾನ ಪಡೆದಿದ್ದಾರೆ. ಏಪ್ರಿಲ್-ಮೇ ಅಂತ್ಯಕ್ಕೆ ರ್‍ಯಾಂಕಿಂಗ್‌ನಲ್ಲಿ ಅಗ್ರ-16ರಲ್ಲಿರುವ ಆಟಗಾರರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಸೇನ್ ಪ್ರಗತಿ ಮಹತ್ವದ್ದಾಗಿದೆ.ಎಚ್.ಎಸ್.ಪ್ರಣಯ್ 9ನೇ ಸ್ಥಾನದಲ್ಲೇ ಮುಂದುವರಿದಿದ್ದು, ಕಿದಂಬಿ ಶ್ರೀಕಾಂತ್ 27ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು 11ನೇ, ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.