ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಪುರುಷ : ಇಮಾನೆ ಖೆಲಿಫ್‌ಗೆ ಸ್ಪರ್ಧಿಸಲು ಅವಕಾಶ -ಭಾರಿ ವಿವಾದ!

| Published : Aug 02 2024, 12:49 AM IST / Updated: Aug 02 2024, 04:30 AM IST

ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ಬಾಕ್ಸಿಂಗ್‌ನಲ್ಲಿ ಪುರುಷ : ಇಮಾನೆ ಖೆಲಿಫ್‌ಗೆ ಸ್ಪರ್ಧಿಸಲು ಅವಕಾಶ -ಭಾರಿ ವಿವಾದ!
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರ ಬಾಕ್ಸಿಂಗ್‌ನಲ್ಲಿ ಪುರುಷ ಸ್ಪರ್ಧೆ. ಒಲಿಂಪಿಕ್ಸ್‌ನಲ್ಲಿ ಭಾರಿ ವಿವಾದ. ಅಲ್ಜೀರಿಯಾದ ‘ಜೈವಿಕ ಪುರುಷ’ ಇಮಾನೆ ಖೆಲಿಫ್‌ ಪಂಚ್‌ಗೆ ಮುರಿಯಿತು ಇಟಲಿ ಬಾಕ್ಸರ್‌ ಮೂಗು. ಕೇವಲ 46 ಸೆಕೆಂಡ್‌ನಲ್ಲಿ ಆಟ ಖತಂ.

ಪ್ಯಾರಿಸ್‌: ಅಲ್ಜೀರಿಯಾದ ಇಮಾನೆ ಖೆಲಿಫ್‌ಗೆ ಮಹಿಳಾ ಬಾಕ್ಸಿಂಗ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಗುರುವಾರ ಮಹಿಳೆಯರ 66 ಕೆ.ಜಿ. ವಿಭಾಗದ ಮೊದಲ ಸುತ್ತಿನಲ್ಲಿ ಇಟಲಿಯ ಏಂಜೆಲಾ ಕರಿನಿ ಕೇವಲ 46 ಸೆಕೆಂಡ್‌ಗಳಲ್ಲಿ ಪಂದ್ಯವನ್ನು ನಿಲ್ಲಿಸುವಂತೆ ಕೋರಿ, ಹೊರನಡೆದರು. ಇಮಾನೆಯ ಬಲವಾದ ಪಂಚ್‌ನಿಂದ ಏಂಜೆಲಾರ ಮೂಗು ಮುರಿಯಿತು ಎಂದು ಹೇಳಲಾಗುತ್ತಿದೆ.

 ಏಂಜೆಲಾ ಬಿಕ್ಕಿ ಬಿಕ್ಕಿ ಅಳುತ್ತಿರುವ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಸಾವಿರಾರು ಮಂದಿ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿ (ಐಒಸಿ) ವಿರುದ್ಧ ಕಿಡಿಕಾಡಿದ್ದಾರೆ. ಇಮಾನೆ ದೇಹದಲ್ಲಿ ಪುರುಷರಲ್ಲಿ ಕಂಡುಬರುವ ಎಕ್ಸ್‌ವೈ ಕ್ರೋಮೋಸೋಮ್ಸ್‌ (ವರ್ಣತಂತುಗಳು) ಇವೆ. ಲಿಂಗ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಇಮಾನೆಯನ್ನು ಜೈವಿಕವಾಗಿ ಪುರುಷ ಎನ್ನುವ ಕಾರಣಕ್ಕೆ ಕಳೆದ ವರ್ಷ ನವದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಿರಲಿಲ್ಲ.