ಸಾರಾಂಶ
ಬ್ಲೂಮ್‌ಫಂಟೀನ್(ದ.ಆಫ್ರಿಕಾ): ಐಸಿಸಿ ಅಂಡರ್-19 ಏಕದಿನ ವಿಶ್ವಕಪ್‌ನಲ್ಲಿ ಸತತ 2ನೇ ಗೆಲುವಿನ ನಿರೀಕ್ಷೆಯಲ್ಲಿರುವ 5 ಬಾರಿ ಚಾಂಪಿಯನ್ ಭಾರತ ತಂಡ, ಗುರುವಾರ ಐರ್ಲೆಂಡ್ ವಿರುದ್ಧ ಸೆಣಸಾಡಲಿದೆ.‘ಎ’ ಗುಂಪಿನಲ್ಲಿರುವ ಭಾರತ ಆರಂಭಿಕ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬಾಂಗ್ಲಾದೇಶವನ್ನು 84 ರನ್‌ಗಳಿಂದ ಬಗ್ಗು ಬಡಿದಿತ್ತು. ಅತ್ತ ಐರ್ಲೆಂಡ್ ಟೂರ್ನಿಯಲ್ಲಿ ಈಗಾಗಲೇ 2 ಪಂದ್ಯಗಳನ್ನಾಡಿದ್ದು, ಅಮೆರಿಕ ವಿರುದ್ಧ ಗೆದ್ದಿದ್ದರೆ ಬಾಂಗ್ಲಾದೇಶ ವಿರುದ್ಧ ಸೋಲನುಭವಿಸಿತ್ತು. ಭಾರತ ತಂಡ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದು, ಬ್ಯಾಟಿಂಗ್‌ನಲ್ಲಿ ಸಾಧಾರಣ ಆಟವಾಡಿತ್ತು. ನಾಯಕ ಉದಯ್ ಸಹರಾನ್, ಆದರ್ಶ್ ಸಿಂಗ್ ಅಬ್ಬರಿಸಿದ್ದರೂ ಇತರರಿಂದ ದೊಡ್ಡ ಇನ್ನಿಂಗ್ಸ್ ಮೂಡಿಬಂದಿರಲಿಲ್ಲ. ಐರ್ಲೆಂಡ್ ವಿರುದ್ಧ ಸುಧಾರಿತ ಪ್ರದರ್ಶನ ನೀಡಿ ಗೆಲ್ಲುವ ನಿರೀಕ್ಷೆಯಲ್ಲಿರುವ ಉದಯ್ ಸಹರಾನ್ ಪಡೆ, ಗುಂಪಿನಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಕಾತರದಲ್ಲಿದೆ.ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ-ಲಂಕಾ, ವಿಂಡೀಸ್‌ಗೆ ಜಯಬುಧವಾರ ನಡೆದ ಟೂರ್ನಿಯ ಪಂದ್ಯಗಳಲ್ಲಿ ಶ್ರೀಲಂಕಾ, ವೆಸ್ಟ್‌ಇಂಡೀಸ್, ಪಾಕಿಸ್ತಾನ ತಂಡಗಳು ಜಯಗಳಿಸಿದವು. ನಮೀಬಿಯಾ ವಿರುದ್ಧ ಲಂಕಾ 77 ರನ್, ಸ್ಕಾಟ್ಲೆಂಡ್ ವಿರುದ್ಧ ವಿಂಡೀಸ್ 5 ವಿಕೆಟ್, ನೇಪಾಳ ವಿರುದ್ಧ ಪಾಕಿಸ್ತಾನ -- ವಿಕೆಟ್ ಗೆಲುವು ಸಾಧಿಸಿದವು.