ಕಾಂತಾರ ಚಾಪ್ಟರ್‌ 1 : ಮೊದಲ ವಾರದಲ್ಲೇ ರೂ.509 ಕೋಟಿ ಗಳಿಕೆ

| N/A | Published : Oct 11 2025, 12:45 PM IST

Kantara Chapter 1 BO

ಸಾರಾಂಶ

‘ಕಾಂತಾರ ಚಾಪ್ಟರ್‌ 1’ ಮೊದಲ ವಾರವೇ ವಿಶ್ವಾದ್ಯಂತ 509 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಂಸ್‌ ಈ ಸಂಗತಿಯನ್ನು ಅಧಿಕೃತವಾಗಿ ಘೋಷಿಸಿದೆ.

 ಸಿನಿವಾರ್ತೆ

‘ಕಾಂತಾರ ಚಾಪ್ಟರ್‌ 1’ ಮೊದಲ ವಾರವೇ ವಿಶ್ವಾದ್ಯಂತ 509 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿದೆ. ಈ ಚಿತ್ರ ನಿರ್ಮಿಸಿದ ಹೊಂಬಾಳೆ ಫಿಲಂಸ್‌ ಈ ಸಂಗತಿಯನ್ನು ಅಧಿಕೃತವಾಗಿ ಘೋಷಿಸಿದೆ.

ರಿಷಬ್‌ ಶೆಟ್ಟಿಯವರ ‘ಕಾಂತಾರ ಚಾಪ್ಟರ್‌ 1’ ಚಿತ್ರ ಕೆಜಿಎಫ್‌ ಚಾಪ್ಟರ್‌ 2 ಸಿನಿಮಾದ ದಾಖಲೆಯನ್ನೂ ಶೀಘ್ರ ಮುರಿಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯ ಚಿತ್ರ ಕರ್ನಾಟಕದಲ್ಲಿ ಅಂದಾಜು 130 ಕೋಟಿ ರು.ಗಳ ದಾಖಲೆಯ ಗಳಿಕೆ ಕಂಡಿದೆ.

 ಉತ್ತರ ಭಾರತದಲ್ಲಿ ಹಿಂದಿ ಡಬ್ಬಿಂಗ್‌ ವರ್ಶನ್‌ನಿಂದಲೇ ಅಂದಾಜು 120 ಕೋಟಿ ರು.ಗೂ ಅಧಿಕ ಸಂಗ್ರಹ ಮಾಡಿದೆ. ಭಾರತದಲ್ಲಿ ಸಿನಿಮಾ ಅಂದಾಜು 350 ಕೋಟಿ ರು.ಗೂ ಅಧಿಕ ಗಳಿಕೆ ಮಾಡಿರುವ ಸಾಧ್ಯತೆ ಇದೆ.

Read more Articles on