ರಾಷ್ಟ್ರೀಯ ನೆಟ್‌ ಬಾಲ್‌ ಚಾಂಪಿಯನ್‌ಶಿಪ್‌: ಹರ್ಯಾಣಕ್ಕೆ ತೆರಳಿದ ಕರ್ನಾಟಕ ತಂಡಗಳು

| Published : Jul 24 2024, 12:19 AM IST / Updated: Jul 24 2024, 04:18 AM IST

ಸಾರಾಂಶ

42ನೇ ರಾಷ್ಟ್ರೀಯ ಹಿರಿಯರ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ ಜುಲೈ 25ರಿಂದ ಜುಲೈ 28ರ ವರೆಗೆ ಹರ್ಯಾಣದಲ್ಲಿ ನಡೆಯಲಿದೆ. ಮಹಿಳಾ ತಂಡಕ್ಕೆ ಶಿವಲೀಲಾ, ಪುರುಷರ ತಂಡಕ್ಕೆ ಮನೋಜ್ ನಾಯಕತ್ವ ವಹಿಸಲಿದ್ದಾರೆ.

ಬೆಂಗಳೂರು: ಜುಲೈ 25ರಿಂದ ಜುಲೈ 28ರ ವರೆಗೆ ಹರ್ಯಾಣದಲ್ಲಿ ನಡೆಯಲಿರುವ 42ನೇ ರಾಷ್ಟ್ರೀಯ ಹಿರಿಯರ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಕರ್ನಾಟಕ ತಂಡ ಸಜ್ಜಾಗಿದೆ. ಟೂರ್ನಿಗಾಗಿ ಕರ್ನಾಟಕ ಪುರುಷ ಮತ್ತು ಮಹಿಳಾ ತಂಡಗಳು ಹರ್ಯಾಣಕ್ಕೆ ತೆರಳಿವೆ.

ಮಹಿಳಾ ತಂಡವನ್ನು ಮೈಸೂರಿನ ಶಿವಲೀಲಾ ಎಸ್‌. ಮುನ್ನಡೆಸಲಿದ್ದು, ರಾಮನಗರದ ಸುರಭಿ ಬಿ.ಆರ್‌. ಉಪನಾಯಕಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ತಂಡದಲ್ಲಿ ಮರಿಯಾ ಎಸ್. ಸುತಾರ್, ಮೋನಿಶಾ ಮಂಜುನಾಥ,

ನಾಗೇಶ್ವರಿ ಧಾಮ್ನೇಕರ್, ಮುತ್ತಮ್ಮ ಎಂ.ವಿ., ಪ್ರತೀಕ್ಷಾ, ಸ್ನೇಹಾ ಎಚ್ ಪಿ, ಎಲ್ ಸೋನಾಲಿ, ಸ್ವಾತಿ ಜಿ, ಗೌರಿ,

ವರ್ಷಾ ಜೆ ಕೂಡಾ ಇದ್ದಾರೆ. ಪುರುಷರ ತಂಡಕ್ಕೆ ಬೆಂಗಳೂರು ನಗರ ಮನೋಜ್ ಕೆ ನಾಯಕತ್ವ ವಹಿಸಲಿದ್ದು, ದಕ್ಷಿಣ ಕನ್ನಡದ ಪುನೀತ್ ಕುಮಾರ್‌ ಉಪನಾಯಕನಾಗಿ ನೇಮಕಗೊಂಡಿದ್ದಾರೆ. ಎಸ್.ಅಭಿ, ಅಭಿನಯಕ್ ಡಿ., ಚಂದು, ಚಿರಂತ್ ಗೌಡ, ಹಿತೇಶ್, ಪ್ರಥಮೇಶ್, ಸಾಳುಂಖೆ, ಸುಮಂತ್ ಕೆ ಶೆಟ್ಟಿ, ಶಶಾಂಕ್, ಸುಜನ್, ಸತ್ಯ ದೇವಾಡಿಗ ಕೂಡಾ ತಂಡದಲ್ಲಿದ್ದಾರೆ. ಎರಡೂ ತಂಡಗಳಿಗೆ ಮಾನಸ ಎಲ್‌.ಜಿ. ಕೋಚ್‌ ಆಗಿ ಸೇವೆ ಸಲ್ಲಿಸಲಿದ್ದು, ಕಾವ್ಯ ಡಿ.ಎಸ್‌. ವ್ಯವಸ್ಥಾಪಕಿಯಾಗಿ ತಂಡದ ಜೊತೆ ಪ್ರಯಾಣಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ನೆಟ್‌ಬಾಲ್‌ ಸಂಸ್ಥೆ ಕಾರ್ಯದರ್ಶಿ ಗಿರೀಶ್‌ ಸಿ. ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.