ರಾಷ್ಟ್ರೀಯ ನೆಟ್‌ಬಾಲ್‌: ಬೆಳ್ಳಿ ಗೆದ್ದ ಕರ್ನಾಟಕ ವನಿತೆಯರು

| Published : Mar 24 2024, 01:40 AM IST

ರಾಷ್ಟ್ರೀಯ ನೆಟ್‌ಬಾಲ್‌: ಬೆಳ್ಳಿ ಗೆದ್ದ ಕರ್ನಾಟಕ ವನಿತೆಯರು
Share this Article
  • FB
  • TW
  • Linkdin
  • Email

ಸಾರಾಂಶ

ಲೀಗ್‌ ಹಂತದಲ್ಲಿ ಉತ್ತರ ಪ್ರದೇಶ, ಗುಜರಾತ್‌ ವಿರುದ್ಧ ಗೆದ್ದಿದ್ದ ರಾಜ್ಯ ತಂಡ, 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟೈ ಮಾಡಿಕೊಂಡಿತ್ತು. ಸೆಮಿಫೈನಲ್‌ನಲ್ಲಿ ಹಿಮಾಚಲ ಪ್ರದೇಶವನ್ನು ಸೋಲಿಸಿತ್ತು.

ಕಾರ್ಖೋಡ(ಹರ್ಯಾಣ): 15ನೇ ಆವೃತ್ತಿಯ ಫೆಡರೇಷನ್‌ ಕಪ್‌ ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿದೆ.

ಫೈನಲ್‌ನಲ್ಲಿ ರಾಜ್ಯ ತಂಡ ಹರ್ಯಾಣ ವಿರುದ್ಧ 24-27 ಅಂಕಗಳ ವೀರೋಚಿತ ಸೋಲು ಕಂಡು 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಲೀಗ್‌ ಹಂತದಲ್ಲಿ ಉತ್ತರ ಪ್ರದೇಶ, ಗುಜರಾತ್‌ ವಿರುದ್ಧ ಗೆದ್ದಿದ್ದ ರಾಜ್ಯ ತಂಡ, 3ನೇ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಟೈ ಮಾಡಿಕೊಂಡಿತ್ತು. ಸೆಮಿಫೈನಲ್‌ನಲ್ಲಿ ಹಿಮಾಚಲ ಪ್ರದೇಶವನ್ನು ಸೋಲಿಸಿತ್ತು. ಟೂರ್ನಿಯಲ್ಲಿ 8 ತಂಡಗಳು ಪಾಲ್ಗೊಂಡಿದ್ದವು.

ರಾಷ್ಟ್ರೀಯ ಕಬಡ್ಡಿ: ರಾಜ್ಯಕ್ಕೆ ಕ್ವಾರ್ಟರ್‌ ಫೈನಲಲ್ಲಿ ಸೋಲು

ಅಹ್ಮದ್‌ನಗರ(ಮಹಾರಾಷ್ಟ್ರ): 70ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲನುಭವಿಸಿದೆ. ರಾಜ್ಯಕ್ಕೆ ಅಂತಿಮ 8ರ ಘಟ್ಟದ ಪಂದ್ಯದಲ್ಲಿ ಬಲಿಷ್ಠ ಮಹಾರಾಷ್ಟ್ರ ವಿರುದ್ಧ --- ಅಂಕಗಳ ಸೋಲು ಎದುರಾಯಿತು. ಇದಕ್ಕೂ ಮೊದಲು ಗುಂಪು ಹಂತದಲ್ಲಿ ಎಲ್ಲಾ 4 ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿಯೇ ನಾಕೌಟ್‌ಗೇರಿದ್ದ ರಾಜ್ಯ ತಂಡ ಪ್ರಿ ಕ್ವಾರ್ಟರ್‌ನಲ್ಲಿ ಬಿಹಾರ ವಿರುದ್ಧ 53-25 ಅಂಕಗಳಿಂದ ಜಯ ಗಳಿಸಿತ್ತು.