ಪ್ಯಾರಾ ಬ್ಯಾಡ್ಮಿಂಟನ್‌: 2 ಚಿನ್ನ ಸೇರಿ 12 ಪದಕ ಗೆದ್ದ ಕರ್ನಾಟಕ

| Published : Mar 24 2024, 01:41 AM IST / Updated: Mar 24 2024, 04:57 PM IST

ಪ್ಯಾರಾ ಬ್ಯಾಡ್ಮಿಂಟನ್‌: 2 ಚಿನ್ನ ಸೇರಿ 12 ಪದಕ ಗೆದ್ದ ಕರ್ನಾಟಕ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಶಟ್ಲರ್‌ಗಳು ಬಹುತೇಕ ಎಲ್ಲಾ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿತು. ಈ ಪೈಕಿ ಪಲ್ಲವಿ 2 ಚಿನ್ನದ ಜೊತೆಗೆ ಒಂದು ವಿಭಾಗದಲ್ಲಿ ಕಂಚಿನ ಪದಕವನ್ನೂ ತಮ್ಮದಾಗಿಸಿಕೊಂಡರು.

ರಾಂಚಿ: 6ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶಟ್ಲರ್‌ಗಳು 2 ಚಿನ್ನ ಸೇರಿ 12 ಪದಕ ಗೆದ್ದಿದ್ದಾರೆ. ಡಬ್ಲ್ಯುಎಚ್‌1 ಮಹಿಳೆಯರ ಸಿಂಗಲ್ಸ್‌ ಹಾಗೂ ಡಬ್ಲ್ಯುಎಚ್‌1+ಡಬ್ಲ್ಯುಎಚ್‌2 ಮಹಿಳಾ ಡಬಲ್ಸ್‌ ಸ್ಪರ್ಧೆಯಲ್ಲಿ ಪಲ್ಲವಿ ಚಿನ್ನದ ಪದಕ ಗೆದ್ದರೆ, ಡಬ್ಲ್ಯುಎಚ್‌1+ಡಬ್ಲ್ಯುಎಚ್‌2 ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಅನುಶಾ ಅವರು 3 ವಿಭಾಗಗಳಲ್ಲಿ ಕಂಚಿನ ಪದಕ ಜಯಿಸಿದರು. ಅವರಿಗೆ ಡಬ್ಲ್ಯುಎಚ್‌1 ಮಹಿಳೆಯರ ಸಿಂಗಲ್ಸ್‌, ಡಬ್ಲ್ಯುಎಚ್‌1+ಡಬ್ಲ್ಯುಎಚ್‌1 ಮಹಿಳಾ ಡಬಲ್ಸ್‌, ಡಬ್ಲ್ಯುಎಚ್‌1+ಡಬ್ಲ್ಯುಎಚ್‌2 ಮಿಶ್ರ ಡಬಲ್ಸ್‌ನಲ್ಲಿ ಪದಕ ಲಭಿಸಿತು.

ಅಮ್ಮು ಮೋಹನ್‌ 1 ಬೆಳ್ಳಿ ಹಾಗೂ 2 ಕಂಚು ಗೆದ್ದರು. ಡಬ್ಲ್ಯುಎಚ್‌1+ಡಬ್ಲ್ಯುಎಚ್‌2 ಮಿಶ್ರ ಡಬಲ್ಸ್‌ನಲ್ಲಿ ಬೆಳ್ಳಿ ಪಡೆದರೆ, ಡಬ್ಲ್ಯುಎಚ್‌1+ಡಬ್ಲ್ಯುಎಚ್‌2 ಮಹಿಳಾ ಡಬಲ್ಸ್‌ ಹಾಗೂ ಡಬ್ಲ್ಯುಎಚ್‌2 ಮಹಿಳಾ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಒಲಿಯಿತು.

ಪುರುಷರ ಡಬ್ಲ್ಯುಎಚ್‌2 ಸಿಂಗಲ್ಸ್‌ ಹಾಗೂ ಡಬ್ಲ್ಯುಎಚ್‌1+ಡಬ್ಲ್ಯುಎಚ್‌2 ಮಿಶ್ರ ಡಬಲ್ಸ್‌ನಲ್ಲಿ ಸಿದ್ದಣ್ಣ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಸುಮಿತ್‌ ಕುಮಾರ್‌ ಅವರು ಎಸ್‌ಯು5 ಪುರುಷರ ಡಬಲ್ಸ್‌ನಲ್ಲಿ ಕಂಚಿನ ಪದಕ ಪಡೆದುಕೊಂಡರು.