ದಕ್ಷಿಣ ಏಷ್ಯಾ ಜೂ. ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿಗೆ ಮಹಿಳೆಯರ 200 ಮೀ. ರೇಸ್‌ನಲ್ಲಿ ಕೂಟ ದಾಖಲೆಯ ಚಿನ್ನ

| Published : Sep 14 2024, 01:52 AM IST / Updated: Sep 14 2024, 04:19 AM IST

ದಕ್ಷಿಣ ಏಷ್ಯಾ ಜೂ. ಅಥ್ಲೆಟಿಕ್ಸ್‌: ರಾಜ್ಯದ ಉನ್ನತಿಗೆ ಮಹಿಳೆಯರ 200 ಮೀ. ರೇಸ್‌ನಲ್ಲಿ ಕೂಟ ದಾಖಲೆಯ ಚಿನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಗುರುವಾರ 100 ಮೀ. ಹರ್ಡಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಉನ್ನತಿ, ಕೂಟದ ಕೊನೆ ದಿನವಾದ ಶುಕ್ರವಾರ ಮಹಿಳೆಯರ 200 ಮೀ. ರೇಸ್‌ನಲ್ಲಿ 11 ವರ್ಷ ಹಳೆಯ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು.

ಚೆನ್ನೈ: ದಕ್ಷಿಣ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ 2ನೇ ಚಿನ್ನದ ಪದಕ ಗೆದ್ದಿದ್ದಾರೆ. ಗುರುವಾರ 100 ಮೀ. ಹರ್ಡಲ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಉನ್ನತಿ, ಕೂಟದ ಕೊನೆ ದಿನವಾದ ಶುಕ್ರವಾರ ಮಹಿಳೆಯರ 200 ಮೀ. ರೇಸ್‌ನಲ್ಲಿ 11 ವರ್ಷ ಹಳೆಯ ಕೂಟ ದಾಖಲೆಯೊಂದಿಗೆ ಬಂಗಾರ ಜಯಿಸಿದರು.

 ಅವರು 23.91 ಸೆಕೆಂಡ್‌ಗಳಲ್ಲಿ ಕ್ರಮಿಸಿದರು. ಈ ಸ್ಪರ್ಧೆಯಲ್ಲಿ ಭಾರತ ಕ್ಲೀನ್‌ಸ್ವೀಪ್‌ ಮಾಡಿತು. ನಾನ್ಸಿ(24.11 ಸೆಕೆಂಡ್‌) ಬೆಳ್ಳಿ, ನೀರು ಪಾಠಕ್‌(24.91 ಸೆಕೆಂಡ್‌) ಕಂಚು ಪಡೆದರು. 2013ರಲ್ಲಿ ಸುಸೀಂದ್ರನ್‌ 24.32 ಸೆಕೆಂಡ್‌ಗಳಲ್ಲಿ ಕ್ರಮಿಸಿದ್ದು ಈವರೆಗೆ ದಾಖಲೆಯಾಗಿತ್ತು. ಇನ್ನು, ಮಹಿಳೆಯರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ನಾನ್ಸಿ, ಅಬಿನಯ, ಕರ್ನಾಟಕದ ಕಾರ್ನಿಲಿಯೊ ಹಾಗೂ ಸುದೀಕ್ಷಾ ಇದ್ದ ತಂಡ ಬಂಗಾರದ ಸಾಧನೆ ಮಾಡಿತು. 

ಪುರುಷರ 4*100 ಮೀ.ನಲ್ಲಿ ಬೆಳ್ಳಿ, ಜಾವೆಲಿನ್‌ ಎಸೆತದಲ್ಲಿ ರೋಹನ್‌ ಯಾದವ್‌ಗೆ ಚಿನ್ನ, ದೀಪಾನ್ಶುಗೆ ಬೆಳ್ಳಿ, 200 ಮೀ. ಓಟದಲ್ಲಿ ಪ್ರತೀಕ್‌ಗೆ ಬೆಳ್ಳಿ, ಮಹಿಳೆಯರ ಟ್ರಿಪಲ್‌ ಜಂಪ್‌ನಲ್ಲಿ ರಿಶಿಕಾಗೆ ಚಿನ್ನ, 1500 ಮೀ. ರೇಸ್‌ನಲ್ಲಿ ವಿನೀತಗೆ ಚಿನ್ನ, ಲಕ್ಷಿತಾಗೆ ಬೆಳ್ಳಿ, ಪುರುಷರ 1500 ಮೀ.ನಲ್ಲಿ ಪ್ರಿಯಾನ್ಶುಗೆ ಚಿನ್ನ, ರಾಹುಲ್‌ಗೆ ಬೆಳ್ಳಿ, ಮಹಿಳೆಯರ ಶಾಟ್‌ಪುಟ್‌ನಲ್ಲಿ ತಮನ್ನಾಗೆ ಚಿನ್ನ, ಪೂಜಾಗೆ ಬೆಳ್ಳಿ, ಜಾವೆಲಿನ್‌ನಲ್ಲಿ ದೀಪಿಕಾಗೆ ಚಿನ್ನ, ಪೂನಂಗೆ ಬೆಳ್ಳಿ ಲಭಿಸಿತು.