ದಕ್ಷಿಣ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ ಬಂಗಾರದ ಸಾಧನೆ

| Published : Sep 13 2024, 01:39 AM IST / Updated: Sep 13 2024, 04:17 AM IST

ಸಾರಾಂಶ

ಗುರುವಾರ ಭಾರತ 9 ಚಿನ್ನ, 9 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ. ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಉನ್ನತಿ ಅಯ್ಯಪ್ಪ 13.93 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು.

ಚೆನ್ನೈ: ಇಲ್ಲಿ ನಡೆಯುತ್ತಿರುವ ದಕ್ಷಿನ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಮತ್ತೆ ಪ್ರಾಬಲ್ಯ ಸಾಧಿಸಿದೆ. ಕೂಟದ 2ನೇ ದಿನವಾದ ಗುರುವಾರ 9 ಚಿನ್ನ, 9 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ.ಮಹಿಳೆಯರ 100 ಮೀ. ಹರ್ಡಲ್ಸ್‌ನಲ್ಲಿ ಕರ್ನಾಟಕದ ಉನ್ನತಿ ಅಯ್ಯಪ್ಪ 13.93 ಸೆಕೆಂಡ್‌ಗಳಲ್ಲಿ ಕ್ರಮಿಸಿ, ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದರು. 

ಭಾರತದವರೇ ಅದ ಸಬಿತಾ(13.96) ಕೂಡಾ ಕೂಟ ದಾಖಲೆ ಬರೆದು ಬೆಳ್ಳಿ ಗೆದ್ದರು. ಮಹಿಳೆಯರ ಡಿಸ್ಕಸ್‌ ಎಸೆತದಲ್ಲಿ ಅನೀಶಾ ಚಿನ್ನ, ಅಮಾನತ್‌ ಬೆಳ್ಳಿ, 3000 ಮೀ. ರೇಸ್‌ನಲ್ಲಿ ಪ್ರಾಚಿ ಚಿನ್ನ, ಶಿಲ್ಪಾ ಬೆಳ್ಳಿ, ಲಾಂಗ್‌ಜಂಪ್‌ನಲ್ಲಿ ಪ್ರತೀಕ್ಷಾ ಚಿನ್ನ, ಲಕ್ಷಣ್ಯ ಬೆಳ್ಳಿ, 400 ರೇಸ್‌ನಲ್ಲಿ ನೀರು ಪಾಠಕ್‌ ಚಿನ್ನ, ಸಂದ್ರಾಮೊಲ್‌ ಸಾಬು ಬೆಳ್ಳಿ ಗೆದ್ದರು.ಪುರುಷರ ಲಾಂಗ್‌ಜಂಪ್‌ನಲ್ಲಿ ಜಿತಿನ್‌ ಚಿನ್ನ, ಮೊಹಮ್ಮದ್‌ ಸಾಜಿದ್‌ ಬೆಳ್ಳಿ, 300 ಮೀ. ರೇಸ್‌ನಲ್ಲಿ ಶಾರುಖ್‌ ಖಾನ್‌ ಚಿನ್ನ, ಮೋಹಿತ್‌ ಬೆಳ್ಳಿ ತಮ್ಮದಾಗಿಸಿಕೊಂಡರು. ಪುರುಷರ ಡಿಸ್ಕಸ್‌ ಎಸೆತದಲ್ಲಿ ರಿತಿಕ್‌ ಚಿನ್ನ, ರಮನ್‌ ಬೆಳ್ಳಿ, 400 ಮೀ.ನಲ್ಲಿ ಜಯ್‌ ಕುಮಾರ್‌ ಚಿನ್ನ, ಅಭಿರಾಮ್‌ ಕಂಚು, 110 ಮೀ. ಹರ್ಡಲ್ಸ್‌ನಲ್ಲಿ ನಯಾನ್‌ ಪ್ರದೀಪ್‌ ಬೆಳ್ಳಿ ಜಯಿಸಿದರು. ಕೂಟ ಶುಕ್ರವಾರ ಕೊನೆಗೊಳ್ಳಲಿದೆ.