ಸಾರಾಂಶ
ಬೆಂಗಳೂರು: ಮಹಾರಾಜ ಟ್ರೋಫಿ ಟಿ20 ಲೀಗ್‌ನಲ್ಲಿ ಮಂಗಳೂರು ಡ್ರ್ಯಾಗನ್ಸ್ ಸತತ 5ನೇ, ಒಟ್ಟಾರೆ 7ನೇ ಸೋಲನುಭವಿಸಿದೆ. ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿದ್ದ ತಂಡ ಬುಧವಾರ ಮೈಸೂರು ವಾರಿಯರ್ಸ್ ವಿರುದ್ಧ 6 ವಿಕೆಟ್‌ಗಳಿಂದ ಪರಾಭವಗೊಂಡಿತು.
ಮೈಸೂರು 6ನೇ ಗೆಲುವು ದಾಖಲಿಸಿತು.ಮೊದಲು ಬ್ಯಾಟ್ ಮಾಡಿದ ಮಂಗಳೂರು 9 ವಿಕೆಟ್‌ಗೆ 178 ರನ್ ಕಲೆಹಾಕಿತು. ಸಿದ್ಧಾರ್ಥ್ 36 ಎಸೆತಗಳಲ್ಲಿ 50, ತುಷಾರ್ ಸಿಂಗ್ 26 ಎಸೆತಗಳಲ್ಲಿ 43 ರನ್, ಲೋಚನ್ ಗೌಡ 25 ಸಿಡಿಸಿದರು.
ಕಾರ್ತಿಕ್ ಸಿ.ಎ., ಕೆ.ಗೌತಮ್ ಹಾಗೂ ಮನೋಜ್ ಭಾಂಡಗೆ ತಲಾ 2 ವಿಕೆಟ್ ಕಿತ್ತರು.ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಮೈಸೂರು 18.4 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಗಳಿಸಿತು. ಕರುಣ್ ನಾಯರ್ ಮತ್ತೆ ಸ್ಫೋಟಕ ಆಟವಾಡಿ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಅವರು 31 ಎಸೆತಗಳಲ್ಲಿ 64 ರನ್ ಸಿಡಿಸಿದರು. ಎಸ್.ಯು. ಕಾರ್ತಿಕ್ 52 ಎಸೆತಗಳಲ್ಲಿ 69 ರನ್ ಗಳಿಸಿದರು.
ಬುಧವಾರದ ಮತ್ತೊಂದು ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್ 6 ವಿಕೆಟ್ ಗೆಲುವು ಸಾಧಿಸಿತು.
ಇಂದಿನ ಪಂದ್ಯಗಳು
ಬೆಂಗಳೂರು-ಮಂಗಳೂರು, ಮಧ್ಯಾಹ್ನ 3ಕ್ಕೆ, ಗುಲ್ಬರ್ಗಾ-ಹುಬ್ಭಳ್ಳಿ, ಸಂಜೆ 7 ಗಂಟೆಗೆ