ಇಂದಿನಿಂದ ಬೆಂಗ್ಳೂರಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಕೂಟ

| Published : Mar 27 2024, 01:07 AM IST

ಇಂದಿನಿಂದ ಬೆಂಗ್ಳೂರಲ್ಲಿ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು, ದಾವಣೆಗೆರೆ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಿಂದ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಬೆಂಗಳೂರು: ಕರ್ನಾಟಕ ರಾಜ್ಯ ಬಾಸ್ಕೆಟ್‌ಬಾಲ್‌ ಸಂಸ್ಥೆ ಆಯೋಜಿಸುವ ಪುರುಷರ ರಾಜ್ಯ ಮಟ್ಟದ ಗ್ರಾಮೀಣ ಬಾಸ್ಕೆಟ್‌ಬಾಲ್‌ ಲೀಗ್‌ ಫೈನಲ್‌ ಹಂತ ಮಾ.27ರಿಂದ 30ರ ವರೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಪಂದ್ಯಗಳು ನಾಕೌಟ್‌ ಮಾದರಿಯಲ್ಲಿ ಆಯೋಜನೆಗೊಳ್ಳಲಿವೆ. ಮಂಗಳೂರು, ದಾವಣೆಗೆರೆ, ಬಾಗಲಕೋಟೆ ಸೇರಿದಂತೆ ವಿವಿಧ ಕಡೆಗಳಿಂದ ಒಟ್ಟು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.ಹಾಕಿ ಇಂಡಿಯಾ ಪ್ರಶಸ್ತಿ ರೇಸಲ್ಲಿ ಶ್ರೀಜೇಶ್‌, ಹರ್ಮನ್‌

ನವದೆಹಲಿ: ಭಾರತದ ತಾರಾ ಹಾಕಿ ಪಟುಗಳಾದ ಶ್ರೀಜೇಶ್‌, ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಸವಿತಾ ಪೂನಿಯಾ ಹಾಕಿ ಇಂಡಿಯಾದ ವಾರ್ಷಿಕ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ದಿಗ್ಗಜ ಗೋಲ್‌ಕೀಪರ್‌ ಶ್ರೀಜೇಶ್‌ ಹಾಗೂ ಪೂನಿಯಾ ಕ್ರಮವಾಗಿ ಪುರುಷರ ಹಾಗೂ ಮಹಿಳಾ ವಿಭಾಗಗಳಲ್ಲಿ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಪುರುಷರ ತಂಡದ ನಾಯಕ ಹರ್ಮನ್‌ಪ್ರೀತ್‌ ವರ್ಷದ ಆಟಗಾರ ಹಾಗೂ ಶ್ರೇಷ್ಠ ಡಿಫೆಂಡರ್‌ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ. ಒಟ್ಟು 8 ವಿಭಾಗಗಳಲ್ಲಿ 32 ಮಂದಿ ಪ್ರಶಸ್ತಿ ರೇಸ್‌ನಲ್ಲಿದ್ದು, ಮಾ.31ಕ್ಕೆ ಹಾಕಿ ಇಂಡಿಯಾ ವಿಜೇತರ ಹೆಸರು ಪ್ರಕಟಿಸಲಿದೆ.