ಲಖನೌ ತಂಡದ ಮಾಲಿಕ ಗೋಯೆಂಕಾರನ್ನು ಭೇಟಿ ಮಾಡಿದ ರಾಹುಲ್‌: ಕುತೂಹಲ!

| Published : Aug 28 2024, 12:54 AM IST

ಲಖನೌ ತಂಡದ ಮಾಲಿಕ ಗೋಯೆಂಕಾರನ್ನು ಭೇಟಿ ಮಾಡಿದ ರಾಹುಲ್‌: ಕುತೂಹಲ!
Share this Article
  • FB
  • TW
  • Linkdin
  • Email

ಸಾರಾಂಶ

ಲಖನೌ ತಂಡದ ಮಾಲಿಕ ಸಂಜೀವ್‌ ಗೋಯೆಂಕಾರನ್ನು ಭೇಟಿಯಾದ ಕೆ.ಎಲ್‌.ರಾಹುಲ್‌. ಆಟಗಾರರ ಹರಾಜಿಗೂ ಮುನ್ನ ತಂಡದಲ್ಲಿ ರೀಟೈನ್‌ ಆಗುವ ನಿರೀಕ್ಷೆ.

ನವದೆಹಲಿ: 2025ರ ಐಪಿಎಲ್‌ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಗೆ ಸಮಯ ಹತ್ತಿರ ಬರುತ್ತಿದ್ದಂತೆ ಕೆಲ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ.

ಹಿಂದಿನ ಆವೃತ್ತಿಗಳಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಮುನ್ನಡೆಸಿದ್ದ ಕೆ.ಎಲ್‌.ರಾಹುಲ್‌, ಮುಂದಿನ ಆವೃತ್ತಿಗೂ ಅದೇ ತಂಡದಲ್ಲಿ ಉಳಿಯಲಿದ್ದಾರೋ ಅಥವಾ ಹರಾಜಿಗೂ ಮುನ್ನ ತಂಡ ಅವರನ್ನು ಕೈಬಿಡಲಿದೆಯೋ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

ಸೋಮವಾರ ರಾಹುಲ್‌, ಕೋಲ್ಕತಾಕ್ಕೆ ತೆರಳಿ ಲಖನೌ ತಂಡದ ಮಾಲಿಕ ಸಂಜೀವ್‌ ಗೋಯೆಂಕಾ ಅವರನ್ನು ಭೇಟಿಯಾಗಿ, 1 ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದರು. ಇದೀಗ ಗೋಯೆಂಕಾ ದಿಢೀರನೆ ಬುಧವಾರ ಪತ್ರಿಕಾಗೋಷ್ಠಿ ಕರೆದಿದ್ದು, ಯಾವ ವಿಷಯ ಬಹಿರಂಗಪಡಿಸಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ.