ಕೊಡವ ಹಾಕಿ: ಉದಿಯಂಡ, ಅನ್ನಾಡಿಯಂಡ, ಚೋದು ಮಂಡ ತಂಡಕ್ಕೆ ಗೆಲುವು

| Published : Apr 01 2024, 12:45 AM IST / Updated: Apr 01 2024, 07:20 AM IST

ಸಾರಾಂಶ

ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿದೆ. ಸೋಮವಾರವೂ ವಿವಿಧ ಮೈದಾನಗಳಲ್ಲಿ ಹಲವು ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಲಿವೆ.

ದುಗ್ಗಳ ಸದಾನಂದ

 ನಾಪೋಕ್ಲು :  ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್-2024 ಹಾಕಿ ಪಂದ್ಯಾವಳಿಯ ಭಾನುವಾರ ನಡೆದ ಪಂದ್ಯದಲ್ಲಿ ಉದಿಯಂಡ, ಅನ್ನಾಡಿಯಂಡ, ಚೋದು ಮಂಡ, ಕನ್ಂಬೀರ, ಕುಕ್ಕೇರ, ಅಲ್ಲಾಪಿರ, ಗುಮ್ಮಟಿರ, ಕವಾಡಿಚಂ, ಗುಮ್ಮಟೀರ, ಕೂಡಂಡ ಸೇರಿದಂತೆ 17 ತಂಡಗಳು ಮುನ್ನಡೆ ಸಾಧಿಸಿದವು.

ಮೈದಾನ ಒಂದರಲ್ಲಿ ಉದಿಯಂಡ ತಂಡವು ನಾಟೋಳಂಡ ತಂಡದ ವಿರುದ್ಧ 2-0 ಅಂತರದ ಗೆಲುವು ಸಾಧಿಸಿತು. ಉದಿಯಂಟ ಪವನ್ ಪಳಂಗಪ್ಪ ಗೋಲು ಹೊಡೆಯುವುದರ ಮೂಲಕ ತಂಡಕ್ಕೆ ಗೆಲವು ತಂದು ಕೊಟ್ಟರು. ಅನ್ನಾಡಿಯಂಡ ಮತ್ತು ಬೊಳ್ಳೇರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3-2 ಅಂತರದಿಂದ ಬೊಳ್ಳೆರ ಗೆಲವು ಸಾಧಿಸಿತು. ಚೋದುಮಂಡ ತಂಡವು ಅನ್ನೇರಕಂಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲವು ಸಾಧಿಸಿತು. ಚೋದು ಮಂಡ ತಂಡದ ನಿಖಿಲ್ ಕಾವೇರಪ್ಪ 5 ಗೋಲು ಸಿಡಿಸಿದರು. ಗಗನ್ ಗಣಪತಿ ಒಂದು ಗೋಲ್ ಗಳಿಸಿದರು.

ಮೈದಾನ ಎರಡರಲ್ಲಿ ನಡೆದ ಪಂದ್ಯದಲ್ಲಿ ಕನ್ನಂಬೀರ, ಪಾಂಡ್ಯಂಡ ತಂಡದ ವಿರುದ್ಧ 4-1 ಅಂತರದ ಗೆಲವು ಸಾಧಿಸಿತು. ಕುಕ್ಕೆರ ಮತ್ತು ಪೂದ್ರಿ ಮಾಡ ತಂಡದ ನಡುವೆ ನಡೆದ ಪಂದ್ಯದಲ್ಲಿ ಪೂದ್ರಿ ಮಾಡ ತಂಡ 3-1 ಅಂತರದ ಗೆಲವು ಸಾಧಿಸಿತು. ಬೊಳ್ಳಿಯಂಡ ಮತ್ತು ಅಲ್ಲಾಪಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಪೆನಾಲ್ಟಿ ಶೂಟೌಟ್‌ನಲ್ಲಿ ಅಲ್ಲಾಪಿರ ತಂಡ 3-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು. ಕವಾಡಿಚಂಡ ತಂಡವು 3-1 ಅಂತರದಿಂದ ಪಾರುವಂಗಡ ತಂಡದ ವಿರುದ್ಧ ಹಾಗೂ ಗುಮ್ಮಟ್ಟಿರ ತಂಡವು 3-1 ಅಂತರದಿಂದ ಅಯ್ಯಮಂಡ ತಂಡದ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಗುಮ್ಮಟಿರ ದೇವಮ್ಮ ಮಹಿಳಾ ಗೋಲ್ ಕೀಪರ್ ಆಗಿ ಗಮನ ಸೆಳೆದರು.

ಬೊಪ್ಪಡಂಡ ತಂಡದ ವಿರುದ್ಧ ಕೂಡಂಡ ತಂಡವು 4-0 ಅಂತರದ ಭರ್ಜರಿ ಗೆಲುವು ಸಾಧಿಸಿದರೆ, ತಿರೋಡಿರ ತಂಡವು ಬೊಳ್ಳಿ ಮಂಡ ತಂಡದ ವಿರುದ್ಧ 4-0 ಜಯ ಗಳಿಸಿತು. ಚೌರೀರ (ಹೊದ್ದೂರು) ತಂಡವು ತಾತಪಂಡ ತಂಡದ ವಿರುದ್ಧ 2-0 ಅಂತರದಿಂದ ಗೆಲುವು ಸಾಧಿಸಿತು. ಚೌರಿರ ತಂಡದ ಚೌರಿರ ಶರತ್ ಪೂಣಚ್ಚ 2 ಗೋಲು ದಾಖಲಿಸಿದರು. ಕಟ್ಟೆರ ಮತ್ತು ಪುಲ್ಲಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಟ್ಟೇರ ತಂಡಕ್ಕೆಯಾವುದೇ ಗೋಲು ಲಭ್ಯವಾಗಲಿಲ್ಲ. ಪುಲ್ಲಂಗಡ ತಂಡವು ಒಂದು ಗೋಲು ಗಳಿಸಿ ಗೆದ್ದಿತು.ಅಚ್ಚಾಂಡಿರ ಮತ್ತು ಬೊಲ್ಲಾರಪಂಡ ತಂಡಗಳು ತಲಾ ಎರಡು ಗೋಲು ಗಳಿಸಿ ಸಮಬಲ ಸಾಧಿಸಿದವು. ಪೆನಾಲ್ಟಿ ಶೂಟೌಟ್‌ನಲ್ಲಿ ಅಚ್ಚಾಂಡಿರ ತಂಡ 3- 2 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿತು.

ಇಂದಿನ ಪಂದ್ಯಗಳು

ಮೈದಾನ ಒಂದು9 ಗಂಟೆಗೆ ಆಚೆಯಡ-ಪುಗ್ಗೆರ

10 ಗಂಟೆಗೆ ನಲಿಯಂಡ-ಪೂಲಂಡ

11 ಗಂಟೆಗೆ ಬಾದುಮಂಡ-ಚನ್ನಪಂಡ

12 ಗಂಟೆಗೆ ಕೊಲ್ಲಿ- ಮಲ್ಲೆಂಗಡ

1 ಗಂಟೆಗೆ ಕೋಣಿಯಂಡ -ಮಂಡಿರ

2 ಗಂಟೆಗೆ ಕೈಬುಲಿರ -ಚೇರಂಡ

3 ಗಂಟೆಗೆ ಕೋಲುಮಾದಂಡ -ಅಕ್ಕಪಂಡ

ಮೈದಾನ ಎರಡು

9 ಗಂಟೆಗೆ ಐಚಂಡ- ಮುಕ್ಕಾಟಿರ(ಬೇತ್ರಿ)10 ಗಂಟೆಗೆ ಮಾಚೆಟ್ಟಿರ-ಬೊಳಕಾರಂಡ

11 ಗಂಟೆಗೆ ಗಂಡಂಗಡ- ಮಚ್ಚುರ1 ಗಂಟೆಗೆ ಪಾಲೆಂಗಡ- ಮೇದುರ2 ಗಂಟೆಗೆ ತೆನ್ನಿರ- ಮೂಕಚಂಡ 3 ಗಂಟೆಗೆ ಬೊಳ್ಳಚಂಡ -ಮುಕ್ಕಾಟಿರ

ಮೈದಾನ 3

9 ಗಂಟೆಗೆ ತಾಪಂಡ-ಚೋಕಿರ

10 ಗಂಟೆಗೆ ಕೀತಿರ-ಚೆಯ್ಯಂಡ

11 ಕಾಳಿಮಾಡ-ಮಾದೆಯಂಡ

1 ಗಂಟೆಗೆ ಪದಿಯೆಟ್ಟಿರ -ಕನ್ನಿಕಂಡ

2 ಗಂಟೆಗೆ ಅನ್ನಿರ -ಬೊಟ್ಟಂಗಡ

3 ಗಂಟೆ ಗೆ ಕುಯಿಮಂಡ-ಮಾನಿರ