ಮಹಾರಾಜ ಟ್ರೋಫಿ ಟಿ20: ಸೆಮೀಸ್‌ಗೆ ಮೈಸೂರು ವಾರಿಯರ್ಸ್‌ ಲಗ್ಗೆ

| Published : Aug 28 2024, 12:46 AM IST

ಸಾರಾಂಶ

3ನೇ ಆವೃತ್ತಿಯ ಸೆಮಿಫೈನಲ್‌ ಪ್ರವೇಶಿಸಿದ ಮೈಸೂರು ವಾರಿಯರ್ಸ್‌. ಸೆಮೀಸ್‌ಗೇರಿದ 4ನೇ ತಂಡ. ಹುಬ್ಬಳ್ಳಿ ವಾರಿಯರ್ಸ್‌ ವಿರುದ್ಧ 74 ರನ್‌ಗಳ ಬೃಹತ್‌ ಅಂತರದ ಗೆಲುವು.

ಕನ್ನಡಪ್ರಭ ವಾರ್ತೆ ಬೆಂಗಳೂರು

3ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್‌ ಸೆಮಿಫೈನಲ್‌ ಪ್ರವೇಶಿಸಿದೆ. ಹಾಲಿ ಚಾಂಪಿಯನ್‌ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಕಳೆದ ಆವೃತ್ತಿಯ ರನ್ನರ್‌-ಅಪ್‌ ಮೈಸೂರು ವಾರಿಯರ್ಸ್‌ 74 ರನ್‌ಗಳ ಬೃಹತ್‌ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ಮೈಸೂರು, ಕರುಣ್‌ ನಾಯರ್‌ (48 ಎಸೆತದಲ್ಲಿ ಔಟಾಗದೆ 80 ರನ್‌)ರ ಸ್ಫೋಟಕ ಆಟದ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 191 ರನ್‌ ಗಳಿಸಿತು. ದೊಡ್ಡ ಗುರಿ ಬೆನ್ನತ್ತಿದ ಹುಬ್ಬಳ್ಳಿ, 18.4 ಓವರಲ್ಲಿ 117 ರನ್‌ಗೆ ಆಲೌಟ್‌ ಆಯಿತು.

ಸ್ಕೋರ್‌: ಮೈಸೂರು 20 ಓವರಲ್ಲಿ 191/6 (ಕರುಣ್‌ 80*, ಕಾರ್ತಿಕ್‌ 30, ಮಾಧವ್‌ 2-34), ಹುಬ್ಬಳ್ಳಿ 18.4 ಓವರಲ್ಲಿ 117/10 (ತಾಹ 33, ಮನೋಜ್‌ 2-5)

ಶಿವಮೊಗ್ಗ ಲಯನ್ಸ್‌ಗೆ ರೋಚಕ ಜಯ!

ಮಂಗಳವಾರ ಮೊದಲ ಪಂದ್ಯದಲ್ಲಿ ಗುಲ್ಬರ್ಗಾ ಮಿಸ್ಟಿಕ್ಸ್‌ ವಿರುದ್ಧ 6 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಗುಲ್ಬರ್ಗಾ ಮೊದಲು ಬ್ಯಾಟ್‌ ಮಾಡಿ 5 ವಿಕೆಟ್‌ಗೆ 206 ರನ್‌ ಗಳಿಸಿತು. ಅಭಿನವ್ ಮನೋಹರ್‌ ಕೇವಲ 34 ಎಸೆತದಲ್ಲಿ 9 ಸಿಕ್ಸರ್‌ಗಳೊಂದಿಗೆ ಔಟಾಗದೆ 76 ರನ್‌ ಸಿಡಿಸಿ ತಂಡವನ್ನು ಇನ್ನೂ 5 ಎಸೆತ ಬಾಕಿ ಇರುವಂತೆ ಜಯದ ದಡ ಸೇರಿಸಿದರು.