ಫೆ.11ಕ್ಕೆ ಮಣಿಪಾಲ ಮ್ಯಾರಥಾನ್

| Published : Feb 08 2024, 01:34 AM IST

ಸಾರಾಂಶ

6ನೇ ಮಣಿಪಾಲ ಮ್ಯಾರಥಾನ್ ಫೆ.11ರಂದು ನಡೆಯಲಿದ್ದು, 10ಕ್ಕೂ ಹೆಚ್ಚು ದೇಶಗಳಿಂದ 15,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.

ಉಡುಪಿ: 6ನೇ ಮಣಿಪಾಲ ಮ್ಯಾರಥಾನ್ ಫೆ.11ರಂದು ನಡೆಯಲಿದ್ದು, 10ಕ್ಕೂ ಹೆಚ್ಚು ದೇಶಗಳಿಂದ 15,000ಕ್ಕೂ ಹೆಚ್ಚು ಓಟಗಾರರು ಭಾಗವಹಿಸುವ ನಿರೀಕ್ಷೆಯಿದೆ.ಇದು ವಿಶ್ವವಿದ್ಯಾನಿಲಯವೊಂದು ನಡೆಸುವ ವಿಶ್ವದ ಏಕೈಕ ಮ್ಯಾರಾಥಾನ್. ಈ ಬಾರಿ ಕೀನ್ಯಾ, ಇಥಿಯೋಪಿಯಾ, ಅಮೆರಿಕಾ, ಜಪಾನ್, ಫ್ರಾನ್ಸ್, ಟರ್ಕಿ, ಜರ್ಮನಿ, ಇಂಗ್ಲೆಂಡ್, ಆಸ್ಟ್ರೇಲಿಯಾ ದೇಶಗಳಿಂದ ಸುಮಾರು 100ಕ್ಕೂ ಹೆಚ್ಚು ವಿದೇಶಿ ಓಟಗಾರರು ಭಾಗವಹಿಸಲಿದ್ದಾರೆ.42.19 ಕಿ.ಮೀ. ಫುಲ್ ಮ್ಯಾರಾಥಾನ್, 21.09 ಕಿ.ಮೀ. ಹಾಫ್ ಮ್ಯಾರಾಥಾನ್, 10 ಕಿ.ಮೀ., 5 ಕಿ.ಮೀ., 3 ಕಿ.ಮೀ. ಮ್ಯಾರಾಥಾನ್ ಸ್ಪರ್ಧೆಗಳು ನಡೆಯಲಿದ್ದು, ಒಟ್ಟು 21 ಲಕ್ಷ ರು. ನಗದು ಬಹುಮಾನವಿದೆ. ಮ್ಯಾರಥಾನ್‌ ದಿನ ವಿಶೇಷ ಕಾರ್ನಿವಲ್ ಕೂಡ ಆಯೋಜಿಸಲಾಗಿದೆ.-ಈ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ವಿವರ ನೀಡಿ, ಮಣಿಪಾಲ ಮ್ಯಾರಥಾನ್ ಈಗ ಐಎಎಎಫ್ (ಇಂಟರ್ ನ್ಯಾಷನಲ್ ಅಮೆಚೂರ್ ಅಥ್ಲೆಟಿಕ್ ಫೆಡರೇಶನ್) ಮತ್ತು ಎಐಎಂಎಸ್ (ಅಸೋಸಿಯೇಶನ್ ಆಫ್ ಇಂಟರ್ ನ್ಯಾಷನಲ್ ಮ್ಯಾರಥಾನ್ ಆ್ಯಂಡ್ ಡಿಸ್ಟೆನ್ಸ್ ರೇಸಸ್)ನಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದ್ದು, ವಿಶ್ವದ ಪ್ರತಿಷ್ಠಿತ ಕ್ರೀಡಾ ಸ್ಪರ್ಧೆಯಲ್ಲಿ ಒಂದಾಗಿದೆ ಎಂದು ತಿಳಿಸಿದ್ದಾರೆ.