ದೆಹಲಿ ಫುಟ್ಬಾಲ್‌ ಲೀಗ್‌ನಲ್ಲಿ ಮ್ಯಾಚ್‌ ಫಿಕ್ಸಿಂಗ್‌?: ತನಿಖೆ

| Published : Feb 21 2024, 02:12 AM IST

ಸಾರಾಂಶ

ಡೆಲ್ಲಿ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಮ್ಯಾಕ್‌ ಫಿಕ್ಸಿಂಗ್‌ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ತನಿಖೆ ಆರಂಭಿಸಿದೆ.

ನವದೆಹಲಿ: ಡೆಲ್ಲಿ ಪ್ರೀಮಿಯರ್‌ ಲೀಗ್‌ ಫುಟ್ಬಾಲ್‌ ಟೂರ್ನಿಯಲ್ಲಿ ಮ್ಯಾಕ್‌ ಫಿಕ್ಸಿಂಗ್‌ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ತನಿಖೆ ಆರಂಭಿಸಿದೆ. ಲೀಗ್‌ನ ರೇಂಜರ್ಸ್‌ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಅಹ್ಹಾಬ್‌ ಎಫ್‌ಸಿ ತಂಡದಿಂದ 2 ಸ್ವಂತ ಗೋಲು ದಾಖಲಾಗಿದೆ. ಆದರೆ ಈ ಗೋಲುಗಳು ಉದ್ದೇಶಪೂರ್ವಕ ಎಂಬಂತಿದ್ದು, ವಿಡಿಯೋ ಕೂಡಾ ವೈರಲ್‌ ಆಗಿದೆ. ವಿಡಿಯೋ ವೀಕ್ಷಿಸಿತ ಬಹುತೇಕ ಮಂದಿ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಹೊರಿಸಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸುತ್ತಿರುವ ಎಐಎಫ್‌ಎಫ್‌, ಡೆಲ್ಲಿ ಫುಟ್ಬಾಲ್‌ ಸಂಸ್ಥೆ ಮುಖ್ಯಸ್ಥ ಅನುಗ್‌ ಗುಪ್ತಾಗೆ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದೆ.

ಲೆಕ್ಕ ಪರಿಶೋಧನ ಇಲಾಖೆ ಕ್ರಿಕೆಟ್‌ ಟೂರ್ನಿ ಇಂದಿನಿಂದಬೆಂಗಳೂರು: ಭಾರತೀಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆ ಹಮ್ಮಿಕೊಂಡಿರುವ ದಕ್ಷಿಣ ವಲಯ ಕ್ರಿಕೆಟ್‌ ಪಂದ್ಯಾವಳಿಯು ಫೆ.22, 23ರಂದು ನಡೆಯಲಿದೆ. ನಗರದ ಆರ್‌ಎಸ್‌ಐ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ ಗೊಂಡಿದ್ದು, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ತಂಡಗಳು ಭಾಗಿಯಾಗಲಿವೆ.