ಕುಗ್ಗಿರುವ ಮುಂಬೈಗೆ ಬಲಿಷ್ಠ ರಾಯಲ್ಸ್‌ ಪರೀಕ್ಷೆ

| Published : Apr 22 2024, 02:00 AM IST / Updated: Apr 22 2024, 05:00 AM IST

ಕುಗ್ಗಿರುವ ಮುಂಬೈಗೆ ಬಲಿಷ್ಠ ರಾಯಲ್ಸ್‌ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲೂ ಗೆದ್ದರೆ ಪ್ಲೇ-ಆಫ್‌ಗೆ ಇನ್ನಷ್ಟು ಹತ್ತಿರವಾಗಲಿದೆ.

ಜೈಪುರ: ಆಡಿರುವ 7 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 17ನೇ ಆವೃತ್ತಿ ಐಪಿಎಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ರಾಜಸ್ಥಾನ ರಾಯಲ್ಸ್‌ ತಂಡ ಪ್ಲೇ-ಆಫ್‌ ಹೊಸ್ತಿಲು ತಲುಪುವ ನಿರೀಕ್ಷೆಯಲ್ಲಿದ್ದು, ಸೋಮವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಸೆಣಸಾಡಲಿದೆ. 

ಆದರೆ ಮುಂಬೈ ಮೊದಲ ಮುಖಾಮುಖಿಯ ಸೋಲಿಗೆ ಸೇಡು ತೀರಿಸಿಕೊಳ್ಳುವುದರ ಜೊತೆಗೆ ಅಂಕಪಟ್ಟಿಯಲ್ಲಿ ಮೇಲೇರಲು ಕಾಯುತ್ತಿದೆ. ರಾಜಸ್ಥಾನ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಸಂಘಟಿತ ಹೋರಾಟ ತಂಡದ ಪ್ಲಸ್‌ ಪಾಯಿಂಟ್‌. ಮುಂಬೈ ವಿರುದ್ಧವೂ ತವರಿನ ಪಿಚ್‌ನ ಲಾಭವೆತ್ತಿ ಗೆಲುವು ಸಾಧಿಸಲು ಸಂಜು ಸ್ಯಾಮ್ಸನ್‌ ಪಡೆ ಕಾಯುತ್ತಿದೆ. 
ಅತ್ತ ಮುಂಬೈ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ತನ್ನ ನೈಜ ಚಾಂಪಿಯನ್‌ ಆಟವನ್ನು ಇನ್ನಷ್ಟೇ ಪ್ರದರ್ಶಿಸಬೇಕಿದೆ. ಹಾರ್ದಿಕ್ ಪಾಂಡ್ಯ ನಾಯಕತ್ವದ ತಂಡ 7 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಪ್ಲೇ-ಆಫ್‌ ರೇಸ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.ಒಟ್ಟು ಮುಖಾಮುಖಿ: 28ಮುಂಬೈ: 15ರಾಜಸ್ಥಾನ: 13

ಸಂಭವನೀಯ ಆಟಗಾರರ ಪಟ್ಟಿ

 

ಮುಂಬೈ: ರೋಹಿತ್‌, ಇಶಾನ್‌, ಸೂರ್ಯಕುಮಾರ್‌, ತಿಲಕ್‌, ಹಾರ್ದಿಕ್‌(ನಾಯಕ), ಟಿಮ್‌ ಡೇವಿಡ್‌, ಶೆಫರ್ಡ್‌, ನಬಿ. ಕೋಟ್ಜೀ, ಶ್ರೇಯಸ್‌, ಬೂಮ್ರಾ, ರಾಜಸ್ಥಾನ: ಜೈಸ್ವಾಲ್‌, ಬಟ್ಲರ್‌, ಸ್ಯಾಮ್ಸನ್‌(ನಾಯಕ), ರಿಯಾನ್‌, ಜುರೆಲ್‌, ಹೆಟ್ಮೇಯರ್‌, ಅಶ್ವಿನ್‌, ಬೌಲ್ಟ್‌, ಆವೇಶ್‌, ಕುಲ್ದೀಪ್‌ ಸೆನ್‌, ಚಹಲ್‌.

ಪಂದ್ಯ: ಸಂಜೆ 7.30ಕ್ಕೆ