ಬೆಂಗಳೂರು ಓಪನ್‌ನಲ್ಲಿ ನಗಾಲ್ ಕ್ವಾರ್ಟರ್‌ಗೆ ಲಗ್ಗೆ

| Published : Feb 16 2024, 01:49 AM IST

ಸಾರಾಂಶ

ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ವಿಶ್ವ ನಂ.98 ಸುಮಿತ್‌ ನಗಾಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಬೆಂಗಳೂರು: ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ವಿಶ್ವ ನಂ.98 ಸುಮಿತ್‌ ನಗಾಲ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಗುರುವಾರ ಹಾಂಕಾಂಗ್‌ನ ಕೋಲ್‌ಮನ್‌ ವಾಂಗ್‌ ವಿರುದ್ಧ 6-2, 7-5 ನೇರ ಸೆಟ್‌ಗಳಿಂದ ಗೆಲುವು ದಾಖಲಿಸಿರುವ ನಗಾಲ್‌, ಕ್ವಾರ್ಟರ್‌ನಲ್ಲಿ ಆಸ್ಟ್ರೇಲಿಯಾ ಆ್ಯಡಮ್‌ ವಾಲ್ಟನ್‌ ಅವರನ್ನು ಎದುರಿಸಲಿದ್ದಾರೆ.ಇದಕ್ಕೂ ಮುನ್ನ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ವಾಲ್ಟನ್‌, ಬೆಲ್ಜಿಯಂನ ಗ್ಯುಟೆರ್‌ ಓಂಕ್ಲಿನ್‌ ವಿರುದ್ಧ 6-2, 6-2 ಜಯ ಸಾಧಿಸಿದರು. ಮತ್ತೊಂದು ಸಿಂಗಲ್ಸ್‌ ಪಂದ್ಯದಲ್ಲಿ ಮಾಜಿ ವಿಶ್ವ ನಂ.25, ಕೆನಡಾದ ವಾಸೆಕ್‌ ಪಾಸ್ಪಿಸಿಲ್‌, ಇಟಲಿಯ ಸ್ಟೆಫಾನೊ ನಪೊಲಿಟನೊ ವಿರುದ್ಧ 4-6, 6-4, 4-6ರಿಂದ ಸೋತು ಟೂರ್ನಿಯಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದರು.