ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌: ಆಲ್ಕರಜ್‌, ಒಸಾಕ ಶುಭಾರಂಭ

| Published : May 27 2024, 01:12 AM IST / Updated: May 27 2024, 04:23 AM IST

ಫ್ರೆಂಚ್‌ ಓಪನ್‌ ಗ್ರ್ಯಾನ್‌ ಸ್ಲಾಂ ಟೆನಿಸ್‌: ಆಲ್ಕರಜ್‌, ಒಸಾಕ ಶುಭಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಿಂದ ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ಏಕೈಕ ಟೆನಿಸಿಗ ಎನಿಸಿಕೊಂಡಿರುವ ಸುಮಿತ್‌ ನಗಾಲ್‌ ಸೋಮವಾರ ಮೊದಲ ಸುತ್ತಿನಲ್ಲಿ ರಷ್ಯಾದ ಕರೆನ್‌ ಕಚನೊವ್‌ ವಿರುದ್ಧ ಸೆಣಸಲಿದ್ದಾರೆ.

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌, 2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತ ನವೋಮಿ ಒಸಾಕ ಶುಭಾರಂಭ ಮಾಡಿದ್ದಾರೆ.

ಭಾನುವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ 3ನೇ ಶ್ರೇಯಾಂಕಿತ, ಸ್ಪೇನ್‌ನ ಆಲ್ಕರಜ್‌ ಅಮೆರಿಕ ಜೆ.ಜೆ. ವಾಲ್ಫ್‌ ವಿರುದ್ಧ 6-1, 6-2, 6-1ರಲ್ಲಿ ಜಯಭೇರಿ ಬಾರಿಸಿದರು. ಮಹಿಳಾ ಸಿಂಗಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಒಸಾಕ ಅವರು ಇಟಲಿಯ ಲೂಸಿಯಾ ಬ್ರೊನ್ಜೆಟಿಯನ್ನು 1-6, 6-4, 7-5 ಸೆಟ್‌ಗಳಲ್ಲಿ ಸೋಲಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ 6ನೇ ಶ್ರೇಯಾಂಕಿತ ಆ್ಯಂಡ್ರೆ ರುಬ್ಲೆವ್‌ ಕೂಡಾ 2ನೇ ಸುತ್ತಿಗೇರಿದರು.

ಇಂದು ಭಾರತದ ಸುಮಿತ್‌ ನಗಾಲ್‌ ಸ್ಪರ್ಧೆ

ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿರುವ ಸುಮಿತ್‌ ನಗಾಲ್‌ ಸೋಮವಾರ ಪುರುಷರ ವಿಭಾಗದ ಮೊದಲ ಸುತ್ತಿನಲ್ಲಿ ರಷ್ಯಾದ ಕರೆನ್‌ ಕಚನೊವ್‌ ವಿರುದ್ಧ ಸೆಣಸಲಿದ್ದಾರೆ. 14 ಬಾರಿ ಚಾಂಪಿಯನ್‌ ರಾಫೆಲ್ ನಡಾಲ್‌, 24 ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್‌ ಜೋಕೋವಿಚ್‌, ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌, ಹಾಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಡ್ಯಾನಿಲ್ ಮೆಡ್ವೆಡೆವ್‌ ಸೇರಿ ಪ್ರಮುಖರು ಕೂಡಾ ಕಣಕ್ಕಿಳಿಯಲಿದ್ದು, ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.