ರಾಷ್ಟ್ರೀಯ ಅಥ್ಲೆಟಿಕ್ಸ್‌ : ಕರ್ನಾಟಕ ಮಹಿಳಾ ರಿಲೇ ತಂಡ, ಆರ್ಯ 45.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬಂಗಾರದ ಸಾಧನೆ

| Published : Sep 02 2024, 02:14 AM IST / Updated: Sep 02 2024, 04:32 AM IST

ರಾಷ್ಟ್ರೀಯ ಅಥ್ಲೆಟಿಕ್ಸ್‌ : ಕರ್ನಾಟಕ ಮಹಿಳಾ ರಿಲೇ ತಂಡ, ಆರ್ಯ 45.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಬಂಗಾರದ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ನೇಹಾ, ಧಾನೇಶ್ವರಿ, ಜ್ಯೋತಿಕಾ ಹಾಗೂ ಕಾವೇರಿ ಪಾಟೀಲ್‌ ಅವರನ್ನೊಳಗೊಂಡ ತಂಡ 45.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡಿತು. ಪುರುಷರ ಲಾಂಗ್‌ಜಂಪ್‌ನಲ್ಲಿ ಆರ್ಯ ಚಿನ್ನ ಗೆದ್ದರು.

 ಬೆಂಗಳೂರು : 63ನೇ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಮೊದಲ ಚಿನ್ನ ಗೆದ್ದಿದೆ. ಕೂಟದ 3ನೇ ದಿನವಾದ ಭಾನುವಾರ ಮಹಿಳೆಯರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಸ್ನೇಹಾ ಎಸ್‌.ಎಸ್‌, ಧಾನೇಶ್ವರಿ, ಜ್ಯೋತಿಕಾ ಹಾಗೂ ಕಾವೇರಿ ಪಾಟೀಲ್‌ ಅವರನ್ನೊಳಗೊಂಡ ತಂಡ 45.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದುಕೊಂಡಿತು. 

ರೈಲ್ವೇಸ್‌ ಹಾಗೂ ಒಡಿಶಾ ತಂಡಗಳಿಗೆ ಕ್ರಮವಾಗಿ ಬೆಳ್ಳಿ, ಕಂಚಿನ ಪದಕ ಲಭಿಸಿದವು. ಇನ್ನು, ರೈಲ್ವೇಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಆರ್ಯ ಎಸ್‌. ಪುರುಷರ ಲಾಂಗ್‌ಜಂಪ್‌ನಲ್ಲಿ 7.89 ಮೀ. ದೂರ ಜಿಗಿದು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ರಾಜ್ಯದ ಮಣಿಕಂಠ ಇದ್ದ ಸರ್ವಿಸಸ್‌ ತಂಡ ಪುರುಷರ 4*100 ಮೀ. ರಿಲೇ ಸ್ಪರ್ಧೆಯಲ್ಲಿ ಕಂಚು ಗೆದ್ದಿತು. ಕೂಟ ಸೋಮವಾರ ಕೊನೆಗೊಳ್ಳಲಿದೆ.

ಇಂದಿನಿಂದ ಸಬ್‌ ಜೂನಿಯರ್‌ ರಾಷ್ಟ್ರೀಯ ಫುಟ್ಬಾಲ್‌: ಕರ್ನಾಟಕಕ್ಕೆ ತ್ರೀಶಾ ನಾಯಕಿ

ಬೆಂಗಳೂರು: ಸಬ್‌ ಜೂನಿಯರ್‌ ಬಾಲಕಿಯರ ರಾಷ್ಟ್ರೀಯ ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಸೆ.2ರಿಂದ ಪಶ್ಚಿಮ ಬಂಗಾಳದ ಮಾಲ್ಡಾ ಹಾಗೂ ಬೆಹ್ರಾನ್‌ಪುರದಲ್ಲಿ ನಡೆಯಲಿದೆ. ಕರ್ನಾಟಕ ತಂಡಕ್ಕೆ ಡೆರಿನ್‌ ತ್ರೀಶಾ ಸುಮೇಶ್‌ ನಾಯಕತ್ವ ವಹಿಸಲಿದ್ದಾರೆ. ರಾಜ್ಯ ತಂಡ ಆರಂಭಿಕ ಪಂದ್ಯದಲ್ಲಿ ಸೋಮವಾರ ಗುಜರಾತ್‌ ವಿರುದ್ಧ ಸೆಣಸಲಿದೆ. ಬಳಿಕ ಸೆ.4ರಂದು ಮೇಘಾಲಯ, ಸೆ.6ರಂದು ಬಿಹಾರ ವಿರುದ್ಧ ಸೆಣಸಾಡಲಿದೆ. ರಾಜ್ಯ ತಂಡದಲ್ಲಿ ಅನಿಶಾ ವಿವೇಕ್‌, ಚರಿತಾ, ಅರ್ಚನಾ ರೆಡ್ಡಿ, ಆರ್ಯ ಸುದೀಪ್‌ ಹೆಗ್ಡೆ, ಪ್ರತೀಕ್ಷಾ ಕೂಡಾ ಇದ್ದಾರೆ. ಟೂರ್ನಿ ಸೆ.11ರಂದು ಕೊನೆಗೊಳ್ಳಲಿದೆ.