ರಾಷ್ಟ್ರೀಯ ನೆಟ್‌ಬಾಲ್‌: ರಾಜ್ಯದ ವನಿತೆಯರಿಗೆ ಬೆಳ್ಳಿ

| Published : Jan 18 2024, 02:00 AM IST

ಸಾರಾಂಶ

ತೆಲಂಗಾಣದ ಮೆಹಬೂಬ್‌ ನಗರ್‌ ರಾಷ್ಟ್ರೀಯ ಹಿರಿಯರ 2ನೇ ಪಾಸ್ಟ್‌5 ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ ನಲ್ಲಿ ಕರ್ನಾಟಕದ ಮಹಿಳೆಯರ ತಂಡ ಬೆಳ್ಳಿ ಗೆದ್ದುಕೊಂಡಿದೆ.

ಮೆಹಬೂಬ್‌ ನಗರ್‌: ರಾಷ್ಟ್ರೀಯ ಹಿರಿಯರ 2ನೇ ಪಾಸ್ಟ್‌5 ನೆಟ್‌ಬಾಲ್‌ ಚಾಂಪಿಯನ್‌ಶಿಪ್‌ ನಲ್ಲಿ ಕಾರ್ನಾಟಕದ ಮಹಿಳೆಯರ ತಂಡ ಬೆಳ್ಳಿ ಗೆದ್ದುಕೊಂಡಿದೆ. ತೆಲಂಗಾಣದ ಮೆಹಬೂಬ್‌ ನಗರದ ಡಿಎನ್‌ಎಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಹರ್ಯಾಣ ವಿರುದ್ಧ 26-46 ರಿಂದ ಸೋತ ರಾಜ್ಯ ತಂಡ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ಒಟ್ಟು 27 ತಂಡಗಳು ಪಾಲ್ಗೊಂಡಿದ್ದವು.

2ನೇ ಅನಧಿಕೃತ ಟೆಸ್ಟ್:ಇಂಗ್ಲೆಂಡ್‌ ಲಯನ್ಸ್‌ 382/3ಅಹಮದಾಬಾದ್‌: ಇಲ್ಲಿ ನಡೆಯುತ್ತಿರುವ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ‘ಎ’ ವಿರುದ್ಧ ಇಂಗ್ಲೆಂಡ್‌ ಲಯನ್ಸ್‌ ಮೊದಲ ದಿನದಾಟ ಮುಕ್ತಾಯಕ್ಕೆ 82 ಓವರ್‌ಗಳಲ್ಲಿ 3ವಿಕೆಟ್‌ಗೆ 382 ರನ್‌ ಗಳಿಸಿದೆ. ಬಿರುಸಿನ ಆಟವಾಡಿದ ಕೀಟೊನ್‌ ಜೆನ್ನಿಂಗ್ಸ್‌ 154, ಅಲೆಕ್ಸ್‌ ಲೀಸ್‌ 73 ರನ್‌ ಗಳಿಸಿ ಔಟಾದರು. 93 ರನ್‌ ಗಳಿಸಿರುವ ಜೋಶ್‌ ಬೆಹನ್ನಾನ್‌, 35 ರನ್‌ ಗಳಿಸಿರುವ ಡ್ಯಾನ್‌ ಮೌಸ್ಲೆಯ್‌ 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಭಾರತದ ಪರ ಮಾನವ್‌ ಸುತಾರ್‌ 3 ವಿಕೆಟ್‌ ಪಡೆದಿದ್ದಾರೆ.