ತಂಡ ಸೆಮಿಫೈನಲ್‌ನಲ್ಲಿ ಕೇರಳದ ವಿರುದ್ಧ 3-4 ಅಂತರದಲ್ಲಿ ಸೋತು ಫೈನಲ್‌ಗೇರುವ ಅವಕಾಶ ಕೈಚೆಲ್ಲಿತು.

ವಿಶಾಖಪಟ್ಟಣ: 63ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಸಬ್ ಜೂನಿಯರ್ ಬಾಲಕಿಯರ ತಂಡ ಕಂಚಿನ ಪದಕ ಗೆದ್ದಿದೆ. ಆದ್ಯಾ ಮಂಜುನಾಥ್ ನಾಯಕತ್ವದಲ್ಲಿ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ತಂಡ, ಸೆಮಿಫೈನಲ್‌ನಲ್ಲಿ ಕೇರಳದ ವಿರುದ್ಧ 3-4 ಅಂತರದಲ್ಲಿ ಸೋತು ಫೈನಲ್‌ಗೇರುವ ಅವಕಾಶ ಕೈಚೆಲ್ಲಿತು. ಕೆ.ಎಂ.ಭವನಿತಾ, ದೆದಿಪ್ಯಾ, ಆರಾಧ್ಯ ಪ್ರಮೋದ್, ಅಕ್ಷರ ರಮೇಶ್, ಕುಶಾಲಾ, ಪ್ರತೀಕ್ಷಾ ವಿಜಯ್ ಕುಮಾರ್, ಹರಿಪ್ರಿಯಾ ಮುರಳೀಧರ್, ಆರ್ಯ ಮಂಜುನಾಥ್ ಹಾಗೂ ಸಿಎನ್ ದಿಂಪನಾ ತಂಡದಲ್ಲಿದ್ದರು.ತಂಡಕ್ಕೆ ದಿಲೀಪ್ ಆಂದಾರ್ ಕೋಚ್ ಆಗಿದ್ದರು.ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಇಂದಿನಿಂದ ಶುರು

ದುಬೈ: 12ನೇ ಆವೃತ್ತಿಯ ಅಂಡರ್‌-19 ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿ ಶುಕ್ರವಾರ ಆರಂಭಗೊಳ್ಳಲಿದೆ. ಯುಎಇಯ ದುಬೈ ನಗರದಲ್ಲಿರುವ 2 ಕ್ರೀಡಾಂಗಣಗಳಲ್ಲಿ ಪಂದ್ಯಗಳು ಆಯೋಜನೆಗೊಳ್ಳಲಿವೆ.

ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಡಿ.21ಕ್ಕೆ ಮುಕ್ತಾಯಗೊಳ್ಳಲಿದೆ. ಏಕದಿನ ಮಾದರಿ ಟೂರ್ನಿಯಲ್ಲಿ ಈ ಬಾರಿ 8 ತಂಡಗಳು ಆಡಲಿವೆ. ತಂಡಗಳನ್ನು 2 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿರುವ 8 ಬಾರಿ ಚಾಂಪಿಯನ್‌ ಭಾರತ ತಂಡ, ಶುಕ್ರವಾರ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಯುಎಇ ವಿರುದ್ಧ ಆಡಲಿದೆ. ಬಳಿಕ ಡಿ.14ರಂದು ಮಾಜಿ ಚಾಂಪಿಯನ್‌ ಪಾಕಿಸ್ತಾನ, ಡಿ.16ರಂದು ಮಲೇಷ್ಯಾ ವಿರುದ್ಧ ಸೆಣಸಾಡಲಿದೆ. ಭಾರತ ತಂಡವನ್ನು ಆಯುಶ್‌ ಮ್ಹಾತ್ರೆ ಮುನ್ನಡೆಲಿದ್ದಾರೆ. ವೈಭವ್‌ ಸೂರ್ಯವಂಶಿ, ವಿಹಾನ್‌ ಮಲ್ಹೋತ್ರ ಸೇರಿ ಪ್ರತಿಭಾವಂತ ಆಟಗಾರರು ತಂಡದಲ್ಲಿದ್ದಾರೆ.

ಉಳಿದಂತೆ ಮಾಜಿ ಚಾಂಪಿಯನ್‌ ಅಫ್ಘಾನಿಸ್ತಾನ, ಹಾಲಿ ಚಾಂಪಿಯನ್‌ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ ತಂಡಗಳು ‘ಬಿ’ ಗುಂಪಿನಲ್ಲಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.ಪ್ರತಿದಿನ 2 ಪಂದ್ಯ । ಎಲ್ಲಾ ಪಂದ್ಯ ಬೆಳಗ್ಗೆ 10.30ಕ್ಕೆ ಆರಂಭ

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌ ಹಾಗೂ ಸೋನಿಲೈವ್