ಭಾರೀ ಮಳೆಯಿಂದ ರದ್ದಾದ ಶ್ರೀಲಂಕಾ-ನೇಪಾಳ ಪಂದ್ಯ!

| Published : Jun 13 2024, 12:48 AM IST / Updated: Jun 13 2024, 05:03 AM IST

ಸಾರಾಂಶ

ಪಂದ್ಯ ಮಳೆಯಿಂದಾಗಿ ಟಾಸ್‌ ಕೂಡಾ ಕಾಣದೆ ರದ್ದುಗೊಂಡಿದೆ. ಇದರಿಂದ ಇತ್ತಂಡಗಳೂ ತಲಾ 1 ಅಂಕ ಹಂಚಿಕೊಂದ್ದು ಲಂಕಾದ ಸೂಪರ್‌-8 ಕನಸು ಬಹುತೇಕ ಭಗ್ನ.

ಫ್ಲೋರಿಡಾ: ಮಾಜಿ ಚಾಂಪಿಯನ್‌ ಶ್ರೀಲಂಕಾ ಹಾಗೂ ನೇಪಾಳ ನಡುವಿನ ಟಿ20 ವಿಶ್ವಕಪ್‌ನ ‘ಡಿ’ ಗುಂಪಿನ ಬುಧವಾರದ ಪಂದ್ಯ ಮಳೆಯಿಂದಾಗಿ ಟಾಸ್‌ ಕೂಡಾ ಕಾಣದೆ ರದ್ದುಗೊಂಡಿದೆ.

 ಇದರಿಂದ ಇತ್ತಂಡಗಳೂ ತಲಾ 1 ಅಂಕ ಹಂಚಿಕೊಂದ್ದು, ಶ್ರೀಲಂಕಾದ ಸೂಪರ್‌-8 ಕನಸು ಬಹುತೇಕ ಭಗ್ನಗೊಂಡಿದೆ.ಟೂರ್ನಿಯಲ್ಲಿ ಶ್ರೀಲಂಕಾ 3 ಪಂದ್ಯಗಳಲ್ಲಿ 1 ರದ್ದು, 2 ಸೋಲು ಕಂಡಿದ್ದು, ಕೇವಲ 1 ಅಂಕ ಸಂಪಾದಿಸಿ ಗುಂಪಿನಲ್ಲಿ ಕೊನೆ ಸ್ಥಾನದಲ್ಲಿದೆ. ಗುಂಪಿನಿಂದ ದಕ್ಷಿಣ ಆಫ್ರಿಕಾ(8 ಅಂಕ) ಈಗಾಗಲೇ ಸೂಪರ್‌-8 ಹಂತ ಪ್ರವೇಶಿಸಿದ್ದು, ಮತ್ತೊಂದು ಸ್ಥಾನಕ್ಕಾಗಿ ಬಾಂಗ್ಲಾದೇಶ(2 ಅಂಕ), ನೆದರ್‌ಲೆಂಡ್ಸ್‌(2 ಅಂಕ), ನೇಪಾಳ(1 ಅಂಕ) ಹಾಗೂ ಶ್ರೀಲಂಕಾ ನಡುವೆ ಪೈಪೋಟಿ ಇದೆ. 

ಆದರೆ ಶ್ರೀಲಂಕಾ ಹೊರತುಪಡಿಸಿ ಇತರ 3 ತಂಡಕ್ಕೂ ತಲಾ 2 ಪಂದ್ಯಗಳು ಬಾಕಿಯಿವೆ. ಲಂಕಾ ತಂಡ ನೆದರ್‌ಲೆಂಡ್ಸ್‌ ವಿರುದ್ಧ ಕೊನೆ ಪಂದ್ಯದಲ್ಲಿ ಸೆಣಸಲಿದ್ದು, ಸೂಪರ್‌-8 ಹಂತಕ್ಕೆ ಪ್ರವೇಶಿಸಬೇಕಿದ್ದರೆ ದೊಡ್ಡ ಅಂತರದಲ್ಲಿ ಗೆಲ್ಲುವುದರ ಜೊತೆಗೆ ಇತರ ತಂಡಗಳ ಫಲಿತಾಂಶ ತನ್ನ ಪರವಾಗಿ ಬರಬೇಕಿದೆ. ಆದರೆ ಸದ್ಯದ ಮಟ್ಟಿಗೆ ಇದು ಅಸಾಧ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ.