ಸ್ವಾತಂತ್ರ್ಯ ಸಿಕ್ಕ ಬಳಿಕ ಒಂದೇ ಒಲಿಂಪಿಕ್ಸ್‌ನಲ್ಲಿ 2 ಪದಕ: ಮನು ಭಾಕರ್‌ ಹೊಸ ದಾಖಲೆ!

| Published : Jul 31 2024, 01:05 AM IST / Updated: Jul 31 2024, 07:56 AM IST

ಸ್ವಾತಂತ್ರ್ಯ ಸಿಕ್ಕ ಬಳಿಕ ಒಂದೇ ಒಲಿಂಪಿಕ್ಸ್‌ನಲ್ಲಿ 2 ಪದಕ: ಮನು ಭಾಕರ್‌ ಹೊಸ ದಾಖಲೆ!
Share this Article
  • FB
  • TW
  • Linkdin
  • Email

ಸಾರಾಂಶ

1900ರಲ್ಲಿ ಪ್ಯಾರಿಸ್‌ನಲ್ಲೇ ನಡೆದಿದ್ದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ರಿಟಿಷ್‌ ಅಥ್ಲೀಟ್‌ ನಾರ್ಮನ್‌ ಪ್ರಿಚಾರ್ಡ್‌ 2 ಪದಕ ಗೆದ್ದಿದ್ದರು. 200 ಮೀ. ಓಟ ಹಾಗೂ 200 ಮೀ. ಹರ್ಡಲ್ಸ್‌ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಪ್ಯಾರಿಸ್‌: ಸ್ವಾತಂತ್ರ್ಯ ಬಂದ ಬಳಿಕ ಒಲಿಂಪಿಕ್ಸ್‌ ಆವೃತ್ತಿಯೊಂದರಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನ್ನುವ ದಾಖಲೆಯನ್ನು ಮನು ಭಾಕರ್‌ ಬರೆದಿದ್ದಾರೆ.1900ರಲ್ಲಿ ಪ್ಯಾರಿಸ್‌ನಲ್ಲೇ ನಡೆದಿದ್ದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ರಿಟಿಷ್‌ ಅಥ್ಲೀಟ್‌ ನಾರ್ಮನ್‌ ಪ್ರಿಚಾರ್ಡ್‌ 2 ಪದಕ ಗೆದ್ದಿದ್ದರು. 200 ಮೀ. ಓಟ ಹಾಗೂ 200 ಮೀ. ಹರ್ಡಲ್ಸ್‌ ಸ್ಪರ್ಧೆಗಳಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ಪ್ರಿಚಾರ್ಡ್‌ರನ್ನು ಭಾರತೀಯ ಅಥ್ಲೀಟ್‌ ಎಂದೇ ಪರಿಗಣಿಸಿದರೆ, ವಿಶ್ವ ಅಥ್ಲೆಟಿಕ್ಸ್‌ (ಈ ಮೊದಲು ಐಎಎಎಫ್‌) ಪ್ರಿಚಾರ್ಡ್‌ರನ್ನು ಬ್ರಿಟನ್‌ನವರು ಎಂದು ಗುರುತಿಸಿದೆ. ಬ್ರಿಟನ್‌ ಸಹ ಆತ ನಮ್ಮ ಅಥ್ಲೀಟ್‌ ಎಂದು ಹೇಳಿಕೊಳ್ಳುತ್ತದೆ. ಪ್ರಿಚಾರ್ಡ್‌ 1875ರಲ್ಲಿ ಕಲ್ಕತಾದಲ್ಲಿ ಹುಟ್ಟಿ 1929ರಲ್ಲಿ ಅಮೆರಿದ ಲಾಸ್‌ ಏಂಜಲೀಸ್‌ನಲ್ಲಿ ನಿಧನರಾಗಿದ್ದರು.

 ಸಿಂಧು, ಸುಶೀಲ್‌ ಸಾಲಿಗೆ ಮನು ಭಾಕರ್‌ ಸೇರ್ಪಡೆ!

ಒಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಭಾರತದ ಕೇವಲ 3ನೇ ಕ್ರೀಡಾಪಟು ಮನು ಭಾಕರ್‌. ಈ ಮೊದಲು ಈ ಸಾಧನೆಯನ್ನು ಕುಸ್ತಿಪಟು ಸುಶೀಲ್‌ ಕುಮಾರ್‌ ಹಾಗೂ ಶಟ್ಲರ್‌ ಪಿ.ವಿ.ಸಿಂಧು ಮಾಡಿದ್ದಾರೆ. ಸುಶೀಲ್‌ 2008ರ ಬೀಜಿಂಗ್‌ ಗೇಮ್ಸ್‌ನಲ್ಲಿ ಕಂಚು, 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು. ಸಿಂಧು 2016ರ ರಿಯೋ ಗೇಮ್ಸ್‌ನಲ್ಲಿ ಬೆಳ್ಳಿ, 2020ರ ಟೋಕಿಯೋ ಗೇಮ್ಸ್‌ನಲ್ಲಿ ಕಂಚು ಪಡೆದಿದ್ದರು. ಸಿಂಧು ಹಾಗೂ ಮನು ಇಬ್ಬರಿಗೂ ಪ್ಯಾರಿಸ್‌ನಲ್ಲಿ 3ನೇ ಒಲಿಂಪಿಕ್ಸ್‌ ಪದಕ ಗೆಲ್ಲುವ ಅವಕಾಶವಿದೆ.