ವಿಂಡೀಸ್‌ ಸವಾಲು ಗೆಲ್ಲುತ್ತಾ ಕಿವೀಸ್‌?: ಸೋತರೆ ಬಹುತೇಕ ಹೊರಕ್ಕೆ

| Published : Jun 13 2024, 12:48 AM IST / Updated: Jun 13 2024, 05:04 AM IST

ವಿಂಡೀಸ್‌ ಸವಾಲು ಗೆಲ್ಲುತ್ತಾ ಕಿವೀಸ್‌?: ಸೋತರೆ ಬಹುತೇಕ ಹೊರಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಿವೀಸ್‌ ಹಾಗೂ ವಿಂಡೀಸ್‌ ಪಂದ್ಯ ವರ್ಚುವಲ್‌ ನಾಕೌಟ್‌ ಎನಿಸಿಕೊಂಡಿದೆ. ಕಿವೀಸ್‌ ಗೆದ್ದರೆ ಗುಂಪಿನ ಸೂಪರ್‌-8ರೇಸ್‌ ರೋಚಕತೆ ಸೃಷ್ಟಿಸಲಿದ್ದು, ಸೋತರೆ ತಂಡದ ಹಾದಿ ಬಹುತೇಕ ಬಂದ್ ಆಗಲಿದೆ.

ತರೌಬ: ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲನುಭವಿಸಿರುವ ನ್ಯೂಜಿಲೆಂಡ್‌ ಮಾಡು ಇಲ್ಲವೇ ಮಡಿ ಸ್ಥಿತಿಗೆ ತಲುಪಿದ್ದು, ನಿರ್ಣಾಯಕ ಪಂದ್ಯದಲ್ಲಿ ಗುರುವಾರ ವೆಸ್ಟ್‌ಇಂಡೀಸ್ ವಿರುದ್ಧ ಸೆಣಸಲಿದೆ.

ಕಿವೀಸ್‌ ಇನ್ನಷ್ಟೇ ಅಂಕ ಖಾತೆ ತೆರೆಯಬೇಕಿದ್ದು, ಸೂಪರ್‌-8 ಪ್ರವೇಶಿಬೇಕಿದ್ದರೆ ವಿಂಡೀಸ್‌ ಸೇರಿ ಉಳಿದ 3 ಪಂದ್ಯದಲ್ಲೂ ಗೆಲ್ಲಬೇಕಿದೆ. ‘ಸಿ’ ಗುಂಪಿನಲ್ಲಿ ಅಫ್ಘಾನಿಸ್ತಾನ ಹಾಗೂ ವಿಂಡೀಸ್‌ ಈಗಾಗಲೇ ಆಡಿರುವ 2 ಪಂದ್ಯಗಳಲ್ಲೂ ಗೆದ್ದಿದ್ದು, ತಲಾ 4 ಅಂಕ ಸಂಪಾದಿಸಿ ಮೊದಲೆರಡು ಸ್ಥಾನಗಳಲ್ಲಿವೆ. 

ಆಫ್ಘನ್‌ ನೆಟ್‌ ರನ್‌ರೇಟ್(+5.225) ಉತ್ತಮವಾಗಿದ್ದು, ಮುಂದಿನ ಪಂದ್ಯದಲ್ಲಿ ದುರ್ಬಲ ಪಪುವಾ ನ್ಯೂ ಗಿನಿ ವಿರುದ್ಧ ಆಡಲಿರುವ ಹಿನ್ನೆಲೆಯಲ್ಲಿ ತಂಡ ಸೂಪರ್‌-8 ಹಂತ ಪ್ರವೇಶಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಕಿವೀಸ್‌ ಹಾಗೂ ವಿಂಡೀಸ್‌ ಪಂದ್ಯ ವರ್ಚುವಲ್‌ ನಾಕೌಟ್‌ ಎನಿಸಿಕೊಂಡಿದೆ. ಕಿವೀಸ್‌ ಗೆದ್ದರೆ ಗುಂಪಿನ ಸೂಪರ್‌-8ರೇಸ್‌ ರೋಚಕತೆ ಸೃಷ್ಟಿಸಲಿದ್ದು, ಸೋತರೆ ವಿಂಡೀಸ್‌ ಮುಂದಿನ ಸುತ್ತಿಗೇರಲಿದ್ದು, ಕಿವೀಸ್‌ನ ಹಾದಿ ಬಹುತೇಕ ಬಂದ್ ಆಗಲಿದೆ.

ಪಂದ್ಯ ಆರಂಭ: ಬೆಳಗ್ಗೆ 6 ಗಂಟೆಗೆ

ಬಾಂಗ್ಲಾ vs ನೆದರ್‌ಲೆಂಡ್ಸ್‌

ಗುರುವಾರದ ಮತ್ತೊಂದು ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ನೆದರ್‌ಲೆಂಡ್ಸ್‌ ಮುಖಾಮುಖಿಯಾಗಲಿವೆ. ಬಾಂಗ್ಲಾ ತಂಡ ಶ್ರೀಲಂಕಾ ವಿರುದ್ದ ಗೆದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಸೋತಿದ್ದರೆ, ನೆದರ್‌ಲೆಂಡ್ಸ್‌ ತಂಡ ನೇಪಾಳ ವಿರುದ್ಧ ಜಯಗಳಿಸಿ ದ.ಆಫ್ರಿಕಾ ವಿರುದ್ಧ ಪರಾಭವಗೊಂಡಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಸೂಪರ್‌-8ಗೆ ಇನ್ನಷ್ಟು ಹತ್ತಿರವಾಗಲಿದ್ದು, ಸೋಲುವ ತಂಡದ ಹಾದಿ ಕಠಿಣಗೊಳ್ಳಲಿದೆ. ಪಂದ್ಯ ಮಳೆಯಿಂದ ರದ್ದಾಗದೆ ಫಲಿತಾಂಶ ಲಭಿಸಿದರೆ ಶ್ರೀಲಂಕಾ ಟೂರ್ನಿಯಿಂದ ಹೊರಬೀಳುವುದು ಖಚಿತ.

ಪಂದ್ಯ: ರಾತ್ರಿ 8 ಗಂಟೆಗೆ