ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌: ಕ್ವಾರ್ಟರ್‌ನಲ್ಲಿ ಸೋತ ನಿಶಾಂತ್‌ ದೇವ್‌

| Published : Mar 13 2024, 02:05 AM IST

ಒಲಿಂಪಿಕ್ಸ್‌ ಅರ್ಹತಾ ಬಾಕ್ಸಿಂಗ್‌: ಕ್ವಾರ್ಟರ್‌ನಲ್ಲಿ ಸೋತ ನಿಶಾಂತ್‌ ದೇವ್‌
Share this Article
  • FB
  • TW
  • Linkdin
  • Email

ಸಾರಾಂಶ

ಟೂರ್ನಿಯಲ್ಲಿ ಪಾಲ್ಗೊಂಡ ಭಾರತದ 9 ಮಂದಿ ಬಾಕ್ಸರ್‌ಗಳು ಕೂಡಾ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ ಏಷ್ಯನ್‌ ಗೇಮ್ಸ್‌ನಲ್ಲಿ ಗೆಲ್ಲುವ ಮೂಲಕ 4 ಮಹಿಳಾ ಬಾಕ್ಸರ್‌ಗಳು ಈಗಾಗಲೇ ಒಲಿಂಪಿಕ್ಸ್‌ ಟಿಕೆಟ್‌ ಪಡೆದುಕೊಂಡಿದ್ದಾರೆ.

ಬುಸ್ಟೊ ಅರ್ಸಿಜಿಯೊ(ಇಟಲಿ): ವಿಶ್ವ ಚಾಂಪಿಯನ್‌ಶಿಪ್‌ ಪದಕ ವಿಜೇತ, ಭಾರತದ ತಾರಾ ಬಾಕ್ಸರ್‌ ನಿಶಾಂತ್‌ ದೇವ್‌ರ ಮೊದಲ ಪ್ರಯತ್ನದಲ್ಲೇ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಗಿಟ್ಟಿಸುವ ಕನಸು ಭಗ್ನಗೊಂಡಿದೆ.

ಸೋಮವಾರ ರಾತ್ರಿ ಇಲ್ಲಿ ನಡೆದ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ನಿಶಾಂತ್‌, 2021ರ ವಿಶ್ವ ಚಾಂಪಿಯನ್‌ಶಿಪ್‌ ಬೆಳ್ಳಿ ವಿಜೇತ, ಅಮೆರಿಕದ ಒಮಾರಿ ಜೋನ್ಸ್‌ ವಿರುದ್ಧ 1-4 ಅಂತರದಲ್ಲಿ ಸೋತು ಹೊರಬಿದ್ದಿದ್ದಾರೆ. ಸೆಮೀಸ್‌ಗೇರಿದ್ದರೆ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಿದ್ದರು.ಮೊದಲ ಸುತ್ತಿನಲ್ಲಿ ಒಮಾರಿ ಪ್ರಾಬಲ್ಯ ಸಾಧಿಸಿದರೂ, ನಿಶಾಂತ್‌ ದೇವ್‌ ಬಳಿಕ ಪುಟಿದೆದ್ದು ತೀವ್ರ ಪೈಪೋಟಿ ನೀಡಿದರು. ಆದರೆ ಕೊನೆ 60 ಸೆಕೆಂಡ್‌ಗಳಲ್ಲಿ ಪ್ರಬಲ ಪಂಚ್‌ಗಳ ಮೂಲಕ ಒಮಾರಿ ಗೆಲುವನ್ನು ತನ್ನತ್ತ ಒಲಿಸಿಕೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಪಾಲ್ಗೊಂಡ ಭಾರತದ 9 ಮಂದಿ ಬಾಕ್ಸರ್‌ಗಳು ಕೂಡಾ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾದರು.ಈ ಸೋಲಿನ ಹೊರತಾಗಿಯೂ ನಿಶಾಂತ್‌ ಒಲಿಂಪಿಕ್ಸ್‌ ಆಸೆ ಇನ್ನೂ ಜೀವಂತವಿದೆ. ಮೇ 23ರಿಂದ ಜೂ.3ರ ವರೆಗೆ ಬ್ಯಾಂಕಾಕ್‌ನಲ್ಲಿ 2ನೇ ಅರ್ಹತಾ ಟೂರ್ನಿ ನಡೆಯಲಿದ್ದು, ಅದರಲ್ಲಿ ಗೆದ್ದರೆ ಒಲಿಂಪಿಕ್ಸ್‌ ಪ್ರವೇಶಿಸಲಿದ್ದಾರೆ.

ಸದ್ಯ ಭಾರತದ ನಾಲ್ವರು ಬಾಕ್ಸರ್‌ಗಳು ಮಾತ್ರ ಒಲಿಂಪಿಕ್ಸ್‌ ಟಿಕೆಟ್‌ ಖಚಿತಪಡಿಸಿಕೊಂಡಿದ್ದಾರೆ. ಆದರೆ ಅವರೆಲ್ಲರೂ ಮಹಿಳೆಯರು. ಯಾವುದೇ ಪುರುಷ ಬಾಕ್ಸರ್‌ಗೆ ಈ ವರೆಗೂ ಪ್ಯಾರಿಸ್‌ ಒಲಿಂಪಿಕ್ಸ್‌ ಅರ್ಹತೆ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿಲ್ಲ.