ಒಲಿಂಪಿಕ್ಸ್‌ ಅರ್ಹತಾ ಹಾಕಿ: ಭಾರತಕ್ಕೆ ಸೆಮೀಸ್‌ ಸೋಲು

| Published : Jan 19 2024, 01:48 AM IST

ಸಾರಾಂಶ

ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ಭಾರತದ ವನಿತೆಯರಿಗೆ ಜಪಾನ್‌ ವಿರುದ್ಧ ಜಯ ಅನಿವಾರ್ಯವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಈಡೇರಲು ಜಯ ಸಾಧಿಸಬೇಕಾಗಿದೆ.
ರಾಂಚಿ: ಒಲಿಂಪಿಕ್ಸ್‌ ಅರ್ಹತಾ ಹಾಕಿ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ಜರ್ಮನಿ ವಿರುದ್ಧದ ಸೆಮಿಫೈನಲ್‌ನಲ್ಲಿ ಪೆನಾಲ್ಟಿ ಶೂಟೌಟ್‌ನ ಸಡನ್‌ ಡೆತ್‌ನಲ್ಲಿ ಸೋಲನುಭವಿಸಿದೆ. ಫೈನಲ್‌ಗೇರಿದ ಜರ್ಮನಿ ಒಲಿಂಪಿಕ್ಸ್‌ಗೂ ಅರ್ಹತೆ ಪಡೆಯಿತು. ಭಾರತ 3ನೇ ಸ್ಥಾನಕ್ಕಾಗಿ ಶುಕ್ರವಾರ ಜಪಾನ್‌ ವಿರುದ್ಧ ಆಡಲಿದ್ದು, ಗೆದ್ದರೆ ಒಲಿಂಪಿಕ್ಸ್‌ ಅರ್ಹತೆ ಸಿಗಲಿದ್ದು, ಸೋತರೆ ಒಲಿಂಪಿಕ್ಸ್‌ ಕನಸು ಭಗ್ನಗೊಳ್ಳಲಿದೆ.ಗುರುವಾರದ ಸೆಮೀಸ್‌ ಪಂದ್ಯ ನಿಗದಿತ ಅವಧಿ ಮುಕ್ತಾಯಕ್ಕೆ 2-2 ಗೋಲುಗಳಿಂದ ಸಮಬಲಗೊಂಡಿತು. ಬಳಿಕ ಶೂಟೌಟ್‌ನ ಮೊದಲ 5 ಪ್ರಯತ್ನಗಳಲ್ಲಿ 3-3 ಟೈ ಆದ ಕಾರಣ ಸಡನ್‌ ಡೆತ್‌ ಮೊರೆ ಹೋಗಲಾಯಿತು. 2ನೇ ಪ್ರಯತ್ನದಲ್ಲಿ ಗೋಲು ಬಾರಿಸಿದ ಜರ್ಮನಿ ಫೈನಲ್‌ ಪ್ರವೇಶಿಸಿತು. ಸೆಮಿಫೈನಲ್‌ನಲ್ಲಿ ಸೋಲನುಭವಿಸಿದ ಭಾರತದ ವನಿತೆಯರಿಗೆ ಜಪಾನ್‌ ವಿರುದ್ಧ ಜಯ ಅನಿವಾರ್ಯವಾಗಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದ್ದಾರೆ. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಈಡೇರಲು ಜಯ ಸಾಧಿಸಬೇಕಾಗಿದೆ.