ಸಾರಾಂಶ
ಜೂ.2ರಂದು ಡಲ್ಲಾಸ್‌ನಲ್ಲಿ ಅನಧಿಕೃತವಾಗಿ ಔತಣಕೂಟ ಆಯೋಜಿಸಲಾಗಿದೆ. ಕೂಟಕ್ಕೆ 25 ಅಮೆರಿಕನ್ ಡಾಲರ್(ಅಂದಾಜು ₹2000) ಪ್ರವೇಶ ಶುಲ್ಕವನ್ನೂ ನಿಗದಿಪಡಿಸಲಾಗಿತ್ತು.
ಟೆಕ್ಸಾಸ್: ಟಿ20 ವಿಶ್ವಕಪ್ ಆಡಲು ಅಮೆರಿಕಕ್ಕೆ ತೆರಳಿರುವ ಪಾಕಿಸ್ತಾನ ತಂಡ ಹೆಚ್ಚುವರಿ ಹಣ ಗಳಿಸುವ ಉದ್ದೇಶದಿಂದ ಅಭಿಮಾನಿಗಳ ಜೊತೆ ಔತಣಕೂಟ ಆಯೋಜಿಸಿದೆ ಎನ್ನಲಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ ರಶೀದ್ ಲತೀಫ್ ಸೇರಿದಂತೆ ಹಲವರು ಟೀಕೆ ವ್ಯಕ್ತಪಡಿಸಿದ್ದಾರೆ. ಜೂ.2ರಂದು ಡಲ್ಲಾಸ್‌ನಲ್ಲಿ ಅನಧಿಕೃತವಾಗಿ ಔತಣಕೂಟ ಆಯೋಜಿಸಲಾಗಿದೆ. ಕೂಟಕ್ಕೆ 25 ಅಮೆರಿಕನ್ ಡಾಲರ್(ಅಂದಾಜು ₹2000) ಪ್ರವೇಶ ಶುಲ್ಕವನ್ನೂ ನಿಗದಿಪಡಿಸಲಾಗಿತ್ತು. ಸಾಮಾನ್ಯವಾಗಿ ಆಟಗಾರರು ಅಧಿಕೃತ ಅಥವಾ ಸಹಾಯಾರ್ಥದ ಉದ್ದೇಶದಿಂದ ಔತಣಕೂಟ ಆಯೋಜಿಸುತ್ತಾರೆ. ಆದರೆ ಹೆಚ್ಚುವರಿ ಹಣ ಪಡೆಯಲು ಪಾರ್ಟಿ ಆಯೋಜಿಸಿದ್ದದ್ದು ಸಾಮಾಜಿಕ ತಾಣಗಳಲ್ಲಿ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದೆ.
ಟಿ20 ವಿಶ್ವಕಪ್: ನೇಪಾಳ ವಿರುದ್ಧ ಡಚ್‌ಗೆ ಗೆಲುವುಟೆಕ್ಸಾಸ್: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ನೆದರ್‌ಲೆಂಡ್ಸ್ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ನೇಪಾಳ ವಿರುದ್ಧದ ಪಂದ್ಯದಲ್ಲಿ ಡಚ್ ಪಡೆ 6 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ನೇಪಾಳ, 19.2 ಓವರಲ್ಲಿ ಕೇವಲ 106 ರನ್‌ಗೆ ಆಲೌಟ್ ಆಯಿತು. ನಾಯಕ ರೋಹಿತ್ ಪೌಡೆಲ್ 35 ಎಸೆತದಲ್ಲಿ 37 ರನ್ ಗಳಿಸಿ ತಂಡ 100 ರನ್ ದಾಟಲು ನೆರವಾದರು. ಟಿಮ್ ಪ್ರಿಂಗಲ್ 20ಕ್ಕೆ 3, ಲೊಗನ್ ವಾನ್ ಬೀಕ್ 18ಕ್ಕೆ 3 ವಿಕೆಟ್ ಕಿತ್ತರು. ನೇಪಾಳ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರೂ, ಕಳಪೆ ಫೀಲ್ಡಿಂಗ್‌ನಿಂದಾಗಿ ಪಂದ್ಯ ಸೋತಿತು. ನೇಪಾಳಿ ಕ್ಷೇತ್ರರಕ್ಷಕರು ಹಲವು ಸುಲಭ ಕ್ಯಾಚ್‌ಗಳನ್ನು ಕೈಚೆಲ್ಲಿದರು. ಪರಿಣಾಮ, ನೆದರ್‌ಲೆಂಡ್ಸ್ 18.4 ಓವರಲ್ಲಿ 4 ವಿಕೆಟ್‌ಗೆ 109 ರನ್ ಗಳಿಸಿ ಜಯಿಸಿತು. ಆರಂಭಿಕ ಮ್ಯಾಕ್ಸ್ ಒ’ ಡೌಡ್ 48 ಎಸೆತದಲ್ಲಿ ಔಟಾಗದೆ 54 ರನ್ ಗಳಿಸಿದರು. ಸ್ಕೋರ್: ನೇಪಾಳ 19.2 ಓವರಲ್ಲಿ 106 (ರೋಹಿತ್ 35, ವಾನ್ ಬೀಕ್ 3-18), ನೆದರ್‌ಲೆಂಡ್ಸ್ 18.4 ಓವರಲ್ಲಿ 109/4 (ಒ’ ಡೌಡ್ 54*, ಸೋಮ್‌ಪಾಲ್ 1-18)