ಭಾರತದ ಧ್ವಜ ಹಿಡಿದ ಪಾಕ್ ಚೆಸ್ ಆಟಗಾರರು: ಒಲಿಂಪಿಯಾಡ್‌ನಲ್ಲಿ ಕಂಡುಬಂದ ಸೌಹಾರ್ದತೆ

| Published : Sep 27 2024, 01:17 AM IST / Updated: Sep 27 2024, 04:15 AM IST

ಸಾರಾಂಶ

ಹಂಗೇರಿಯಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಆಟಗಾರರೊಂದಿಗೆ ಪಾಕಿಸ್ತಾನದ ಆಟಗಾರರು ಭಾರತದ ಧ್ವಜ ಹಿಡಿದು ನಿಂತ ಫೋಟೋ ವೈರಲ್ ಆಗಿದೆ.  

ಬುಡಾಪೆಸ್ಟ್‌: ಇತ್ತೀಚೆಗೆ ಹಂಗೇರಿಯಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಟೂರ್ನಿ ಮುಕ್ತಾಯಗೊಂಡ ಬಳಿಕ ಫೋಟೋಶೂಟ್‌ ನಡೆಯುತ್ತಿದ್ದ ಸಂದರ್ಭ ಪಾಕಿಸ್ತಾನದ ಚೆಸ್‌ ಪಟುಗಳು ಭಾರತದ ತ್ರಿವರ್ಣ ಧ್ವಜ ಹಿಡಿದು ಪೋಸ್‌ ಕೊಟ್ಟಿದ್ದಾರೆ. 

ಭಾರತದ ಆಟಗಾರರ ಜೊತೆ ನಿಂತು ಫೋಟೋ ತೆಗೆಸುವ ವೇಳೆ, ಪಾಕ್‌ ಆಟಗಾರರು ಭಾರತದ ಧ್ವಜ ಹಿಡಿಯುವ ದೃಶ್ಯವಿರುವ ವಿಡಿಯೋ, ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಟೂರ್ನಿಯಲ್ಲಿ ಭಾರತ ಮುಕ್ತ, ಮಹಿಳಾ ವಿಭಾಗಗಳಲ್ಲಿ ಚಿನ್ನ ಗೆದ್ದಿತ್ತು. ಪಾಕಿಸ್ತಾನ ಮುಕ್ತ ವಿಭಾಗದಲ್ಲಿ 97, ಮಹಿಳಾ ವಿಭಾಗದಲ್ಲಿ 122ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಒಲಿಂಪಿಯಾಡ್‌ ವಿಜೇತ ಚೆಸ್‌ ಆಟಗಾರರಿಗೆ ತಲಾ ₹20 ಲಕ್ಷ

ನವದೆಹಲಿ: ಇತ್ತೀಚೆಗೆ ಹಂಗೇರಿಯಲ್ಲಿ ನಡೆದ 45ನೇ ಚೆಸ್‌ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತ ಪುರುಷ ಹಾಗೂ ಮಹಿಳಾ ತಂಡಗಳ ಆಟಗಾರರನ್ನು ಗುರುವಾರ ಕೇಂದ್ರ ಕ್ರೀಡಾ ಇಲಾಖೆ ಹಾಗೂ ಭಾರತೀಯ ಕ್ರೀಡಾ ಪ್ರಾಧಿಕಾರ(ಸಾಯ್‌) ವತಿಯಿಂದ ಸನ್ಮಾನಿಸಲಾಯಿತು. 

ಡಿ.ಗುಕೇಶ್‌, ಪ್ರಜ್ಞಾನಂದ, ವಿದಿತ್‌ ಗುಜರಾತಿ, ಅರ್ಜುನ್‌, ಡಿ.ಹರಿಕಾ, ದಿವ್ಯಾ ದೇಶ್‌ಮುಖ್‌, ವಂತಿಕಾ, ಆರ್‌.ವೈಶಾಲಿ ಅವರನ್ನು ಕ್ರೀಡಾ ಸಚಿವ ಮಾನ್ಸುಖ್‌ ಮಾಂಡವೀಯ ಸನ್ಮಾನಿಸಿದರು. ಇದೇ ವೇಳೆ ಆಟಗಾರರಿಗೆ ತಲಾ 20 ಲಕ್ಷ ರು. ಚೆಕ್‌ ಹಸ್ತಾಂತರಿಸಲಾಯಿತು.