ಸಾರಾಂಶ
ಬಾಕ್ಸಿಂಗ್ ಕ್ವಾರ್ಟರ್ ಫೈನಲ್‌ಗೆ ಲವ್ಲೀನಾ ಬೊರ್ಗೊಹೈನ್. ಈಕ್ವೆಸ್ಟ್ರಿಯನ್‌ನಲ್ಲಿ ಭಾರತದ ಸವಾಲು ಮುಕ್ತಾಯ.
ಪ್ಯಾರಿಸ್: ಟೋಕಿಯೋ ಒಲಿಂಪಿಕ್ಸ್ ಕಂಚು ವಿಜೇತ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್ ಪ್ಯಾರಿಸ್ ಗೇಮ್ಸ್‌ನ ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಮತ್ತೊಂದು ಪದಕ ಖಚಿತಪಡಿಸಿಕೊಳ್ಳಲು ಅವರಿಗೆ ಇನ್ನೊಂದು ಗೆಲುವು ಬೇಕಿದೆ.
ಬಾಕ್ಸಿಂಗ್‌ನಲ್ಲಿ ಸೆಮೀಸ್ ಪ್ರವೇಶಿಸಿದರೆ ಪದಕ ಸಿಗಲಿದೆ.ಬುಧವಾರ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ನಾರ್ವೆಯ ಸುನ್ನಿವಾ ಹೊಫ್ಸ್ಟಾಡ್ ವಿರುದ್ಧ 5-0 ಅಂತರದಲ್ಲಿ ಸುಲಭ ಗೆಲುವು ಸಾಧಿಸಿದರು.
ಆ.4ರಂದು ನಡೆಯಲಿರುವ ಕ್ವಾರ್ಟರ್‌ನಲ್ಲಿ ಲವ್ಲೀನಾಗೆ ಅಗ್ರ ಶ್ರೇಯಾಂಕಿತೆ ಚೀನಾದ ಲೀ ಕ್ವಿಯಾನ್ ಎದುರಾಗಲಿದ್ದಾರೆ.ಈಕ್ವೆಸ್ಟ್ರಿಯನ್: ಅನುಶ್ ಸವಾಲು ಮುಕ್ತಾಯಏಷ್ಯನ್ ಗೇಮ್ಸ್ ಪದಕ ವಿಜೇತ, ಭಾರತದ ಈಕ್ವೆಸ್ಟ್ರಿಯನ್ ಪಟು ಅನುಶ್ ಅಗರ್‌ವಾಲಾ ಅವರ ಸವಾಲು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಮುಕ್ತಾಯಗೊಂಡಿದೆ. ವೈಯಕ್ತಿಕ ಡ್ರೆಸ್ಸೇಜ್ ಅರ್ಹತಾ ಸುತ್ತಿನಲ್ಲಿ ಅನುಶ್ ‘ಇ’ ಗುಂಪಿನಲ್ಲಿ 9ನೇ ಸ್ಥಾನ ಪಡೆದರು.