ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್, ಹಾಸನ ಜಿಲ್ಲೆಯಲ್ಲಿ ಪಿಕಲ್‌ಬಾಲ್ ಸಂಸ್ಥೆ ಬಂದಿರುವುದು ಸಂತಸ ತಂದಿದೆ ಎಂದರು.

ಹಾಸನ: ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್‌ನಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಕರ್ನಾಟಕ ರಾಜ್ಯ ಪಿಕಲ್‌ಬಾಲ್ ಅಸೋಸಿಯೇಷನ್ ಈಗ ಗ್ರಾಮೀಣ ಪ್ರದೇಶದ ಪ್ರತಿಭಾವಂತ ಆಟಗಾರರನ್ನು ಗುರುತಿಸಿ, ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ಹಾಸನ ಜಿಲ್ಲಾ ಪಿಕಲ್ ಬಾಲ್ ಅಸೋಸಿಯೇಷನ್ ಶಾಖೆ ಅಧಿಕೃತ ಉದ್ಘಾಟಿಸಿದೆ. ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಜತ್ ಕಂಕರ್, ಹಾಸನ ಜಿಲ್ಲೆಯಲ್ಲಿ ಪಿಕಲ್‌ಬಾಲ್ ಸಂಸ್ಥೆ ಬಂದಿರುವುದು ಸಂತಸ ತಂದಿದೆ ಎಂದರು. ಈ ಆಟ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ಕ್ರೀಡಾಪಟುಗಳಿಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಭಾಗವಹಿಸಲು ಒಂದು ಉತ್ತಮ ವೇದಿಕೆ ಎಂದು ತಿಳಿಸಿದ್ದಾರೆ.ರಾಹುಲ್‌ ಫಿಫ್ಟಿ ಬಾರಿಸಿದರೂ ಸಂಕಷ್ಟದಲ್ಲಿ ಕರ್ನಾಟಕ ಟೀಂ

ಮೊಹಾಲಿ: ಕೆ.ಎಲ್‌.ರಾಹುಲ್‌, ಮಯಾಂಕ್‌ ಅಗರ್‌ವಾಲ್‌ ಆಕರ್ಷಕ ಆಟವಾಡಿದರೂ ಪಂಜಾಬ್‌ ವಿರುದ್ಧ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟದಲ್ಲಿದೆ. ನಾಕೌಟ್‌ಗೇರಲು ಈ ಪಂದ್ಯದಲ್ಲಿ ಕರ್ನಾಟಕ ಗೆಲ್ಲಲೇಬೇಕಿದೆ. ಆದರೆ ತಂಡ ಈಗ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಲು ಹೋರಾಡುತ್ತಿದೆ.

ಪಂಜಾಬ್ 309 ರನ್‌ಗೆ ಅಲೌಟಾಯಿತು. ವಿದ್ಯಾಧರ್ 4 ವಿಕೆಟ್‌ ಕಿತ್ತರು. ಬಳಿಕ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯಕ್ಕೆ ಉತ್ತಮ ಆರಂಭ ದೊರಕಿತು. ಮಯಾಂಕ್‌-ರಾಹುಲ್‌ 102 ರನ್‌ ಜೊತೆಯಾಟವಾಡಿದರು. ಮಯಾಂಕ್‌ 46ಕ್ಕೆ ಔಟಾದರೆ, ರಾಹುಲ್‌ 59 ರನ್‌ ಸಿಡಿಸಿದರು. ಬಳಿಕ ಕುಸಿದ ತಂಡ 166ಕ್ಕೆ 5 ವಿಕೆಟ್‌ ನಷ್ಟಕ್ಕೊಳಗಾಯಿತು. ಆದರೆ ಶ್ರೇಯಸ್‌ ಗೋಪಾಲ್ (ಔಟಾಗದೆ 42) 6ನೇ ವಿಕೆಟ್‌ಗೆ ಕೃತಿಕ್‌ ಕೃಷ್ಣ(28) ಜತೆಗೂಡಿ 47 ರನ್‌, 7ನೇ ವಿಕೆಟ್‌ಗೆ ವಿದ್ಯಾಧರ್‌(ಔಟಾಗದೆ 23) ಜೊತೆಗೂಡಿ 42 ರನ್‌ ಸೇರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಹರ್‌ಪ್ರೀತ್‌ ಬ್ರಾರ್ 4 ವಿಕೆಟ್‌ ಪಡೆದರು.