ರಣಜಿ ಆಡದೆ ಐಪಿಎಲ್‌ಗೆ ಸಿದ್ಧತೆ: ಆಟಗಾರರ ಬಗ್ಗೆ ಬಿಸಿಸಿಐ ಅಸಮಾಧಾನ

| Published : Feb 13 2024, 12:46 AM IST / Updated: Feb 13 2024, 08:48 AM IST

ರಣಜಿ ಆಡದೆ ಐಪಿಎಲ್‌ಗೆ ಸಿದ್ಧತೆ: ಆಟಗಾರರ ಬಗ್ಗೆ ಬಿಸಿಸಿಐ ಅಸಮಾಧಾನ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ರಣಜಿ ಆಡದೆ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಆಟಗಾರರ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ನವದೆಹಲಿ: ರಾಷ್ಟ್ರೀಯ ತಂಡದಲ್ಲಿ ಇಲ್ಲದಿದ್ದರೂ ರಣಜಿ ಆಡದೆ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಆಟಗಾರರ ಬಗ್ಗೆ ಬಿಸಿಸಿಐ ಅಸಮಾಧಾನಗೊಂಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸಾಮಾನ್ಯವಾಗಿ ರಾಷ್ಟ್ರೀಯ ತಂಡದಲ್ಲಿರುವ ಅಥವಾ ಗಾಯಗೊಂಡು ಎನ್‌ಸಿಎನಲ್ಲಿರುವ ಆಟಗಾರರಿಗೆ ಮಾತ್ರ ದೇಸಿ ಕ್ರಿಕೆಟ್‌ನಿಂದ ವಿನಾಯಿತಿ ಇದೆ. 

ಆದರೆ ಸದ್ಯದ ಮಾಹಿತಿ ಪ್ರಕಾರ ಇಶಾನ್‌ ಕಿಶನ್‌ ಸೇರಿದಂತೆ ಕೆಲ ಆಟಗಾರರು ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದು, ಅತ್ತ ರಣಜಿಯಲ್ಲೂ ಆಡುತ್ತಿಲ್ಲ. 

ಇಶನ್‌ ಐಪಿಎಲ್‌ಗೆ ಸಿದ್ಧತೆ ನಡೆಸುತ್ತಿರುವ ಬಗ್ಗೆಯೂ ವರದಿಯಾಗಿತ್ತು. ಇದರಿಂದ ಬಿಸಿಸಿಐ ಅಸಮಾಧಾನಗೊಂಡಿದೆ ಎನ್ನಲಾಗಿದ್ದು, ಶೀಘ್ರದಲ್ಲೇ ಅವರ ಜೊತೆ ಬಿಸಿಸಿಐ ಮಾತುಕತೆ ನಡೆಸಿ, ತಮ್ಮ ತಮ್ಮ ರಾಜ್ಯ ತಂಡಗಳ ಪರ ಆಡುವಂತೆ ಸೂಚಿಸಲಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಸೌರಭ್‌ ತಿವಾರಿ ಎಲ್ಲಾಮಾದರಿ ಕ್ರಿಕೆಟ್‌ಗೆ ನಿವೃತ್ತಿ
ನವದೆಹಲಿ: ಭಾರತದ ಎಡಗೈ ಬ್ಯಾಟರ್‌ ಸೌರಭ್‌ ತಿವಾರಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಸೋಮವಾರ ನಿವೃತ್ತಿ ಘೋಷಿಸಿದ್ದಾರೆ. ರಣಜಿ ಟ್ರೋಫಿಯಲ್ಲಿ ಜಾರ್ಖಂಡ್‌ ಪರ ಆಡುತ್ತಿರುವ 34ರ ತಿವಾರಿ ಫೆ.16ರಿಂದ ಆರಂಭಗೊಳ್ಳಲಿರುವ ರಾಜಸ್ಥಾನ ವಿರುದ್ಧ ಕೊನೆ ಬಾರಿ ಕಣಕ್ಕಿಳಿಯುವಾಗಿ ಪ್ರಕಟಿಸಿದ್ದಾರೆ. 

ತಿವಾರಿ ಭಾರತದ ಪರ 3 ಏಕದಿನ ಪಂದ್ಯಗಳನ್ನಾಡಿದ್ದು, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 189 ಇನ್ನಿಂಗ್ಸ್‌ಗಳಲ್ಲಿ 8030 ರನ್‌ ಕಲೆಹಾಕಿದ್ದಾರೆ. ಐಪಿಎಲ್‌ನಲ್ಲೂ 93 ಪಂದ್ಯಗಳನ್ನಾಡಿದ್ದಾರೆ.