ಪ್ರೈಮ್ ವಾಲಿಬಾಲ್ ಲೀಗ್: ಬೆಂಗಳೂರಿಗೆ ಕೋಲ್ಕತ್ತಾ ಮೊದಲ ಎದುರಾಳಿ

| Published : Feb 12 2024, 01:34 AM IST

ಪ್ರೈಮ್ ವಾಲಿಬಾಲ್ ಲೀಗ್: ಬೆಂಗಳೂರಿಗೆ ಕೋಲ್ಕತ್ತಾ ಮೊದಲ ಎದುರಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ರುಪೇ ಪ್ರೈಮ್ ವಾಲಿಬಾಲ್ ಲೀಗ್ ಮೂರನೇ ಆವೃತ್ತಿಯು ಫೆಬ್ರವರಿ 15 ರಿಂದ ಚೆನ್ನೈ ನಲ್ಲಿ ಆರಂಭವಾಗಲಿದ್ದು, ಪಂಕಜ್ ಶರ್ಮಾ ನಾಯಕತ್ವದ ಬೆಂಗಳೂರು ಟಾರ್ಪೆಡೋಸ್‌ ತಂಡ ಕಪ್ ಗೆಲ್ಲಲು ಸಜ್ಜಾಗಿದೆ.
ಬೆಂಗಳೂರು: ರುಪೇ ಪ್ರೈಮ್ ವಾಲಿಬಾಲ್ ಲೀಗ್ ಮೂರನೇ ಆವೃತ್ತಿಯು ಫೆಬ್ರವರಿ 15 ರಿಂದ ಚೆನ್ನೈ ನಲ್ಲಿ ಆರಂಭವಾಗಲಿದ್ದು, ಪಂಕಜ್ ಶರ್ಮಾ ನಾಯಕತ್ವದ ಬೆಂಗಳೂರು ಟಾರ್ಪೆಡೋಸ್‌ ತಂಡ ಕಪ್ ಗೆಲ್ಲಲು ಸಜ್ಜಾಗಿದೆ. ಅಮೆರಿಕದ ಖ್ಯಾತ ವಾಲಿಬಾಲ್ ಆಟಗಾರ ಡೇವಿಡ್ ಲೀ ಅವರ ಮಾರ್ಗದರ್ಶನದಲ್ಲಿ ನಗರದ ಯಲಹಂಕದಲ್ಲಿರುವ ಪಡುಕೋಣೆ-ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕಳೆದ ಮೂರು ತಿಂಗಳಿಂದ ಸತತ ಅಭ್ಯಾಸ ನಡೆಸುತ್ತಿದೆ. ಫೆ.15ರಂದು ಕೋಲ್ಕತ್ತ ಥಂಡರ್‌ ಬೋಲ್ಟ್ಸ್‌ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ. ಕನ್ನಡಿಗ ಸರ್ಜ್ಜನ್ ಶೆಟ್ಟಿ, ಬ್ರೆಜ್ಜಿಲ್ ಮತ್ತು ಆಸ್ಟ್ರೇಲಿಯಾದ ಯೂನಿವರ್ಸಲ್ ಆಟಗಾರರು ಈ ಬಾರಿ ತಂಡದಲ್ಲಿ ಇದ್ದಾರೆ ಎಂದು ಕೋಚ್ ಡೇವಿಡ್ ಲೀ ತಿಳಿಸಿದ್ದಾರೆ. ಒಟ್ಟು 9 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳತ್ತಿವೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ತಂಡ, ಅಹ್ಮದಾಬಾದ್ ವಿರುದ್ಧ ಪರಾಭವಗೊಂಡಿತ್ತು.