ಪ್ರೊ ಕಬಡ್ಡಿ: ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಬುಲ್ಸ್‌

| Published : Feb 12 2024, 01:31 AM IST / Updated: Feb 12 2024, 12:14 PM IST

Bangaluru Bulls

ಸಾರಾಂಶ

ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರುವ ಕನಸಿನಲ್ಲಿದ್ದ ಬೆಂಗಳೂರು ಬುಲ್ಸ್‌ ಕನಸು ನುಚ್ಚುನೂರಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 28-50 ಅಂಕಗಳ ಹೀನಾಯ ಸೋಲನುಭವಿಸಿದೆ.

ಕೋಲ್ಕತ್ತ: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರುವ ಕನಸಿನಲ್ಲಿದ್ದ ಬೆಂಗಳೂರು ಬುಲ್ಸ್‌ ಕನಸು ನುಚ್ಚುನೂರಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 28-50 ಅಂಕಗಳ ಹೀನಾಯ ಸೋಲನುಭವಿಸಿ, ಇನ್ನೂ 2 ಪಂದ್ಯ ಬಾಕಿಯಿರುವಾಗಲೇ ಪ್ಲೇ-ಆಫ್‌ ಆಸೆ ಕೈಬಿಟ್ಟಿದೆ. 

ಬುಲ್ಸ್‌ ಸದ್ಯ 19 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 48 ಅಂಕ ಸಂಪಾದಿಸಿದ್ದು, 8ನೇ ಸ್ಥಾನದಲ್ಲೇ ಬಾಕಿಯಾಗಿದೆ. ಅತ್ತ ಬುಲ್ಸ್‌ ವಿರುದ್ಧ ಬೃಹತ್‌ ಗೆಲುವು ದಾಖಲಿಸುವ ಮೂಲಕ ಗುಜರಾತ್‌ ಜೈಂಟ್ಸ್‌ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. 

ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌, ತಮಿಳ್‌ ತಲೈವಾಸ್‌ ವಿರುದ್ಧ 56-29 ಅಂಕಗಳ ಬೃಹತ್‌ ಜಯ ದಾಖಲಿಸಿತು.

ಇಂದಿನ ಪಂದ್ಯಗಳು: ಯು.ಪಿ ಮತ್ತು ಜೈಪುರ್‌

 ರಾತ್ರಿ 8ಕ್ಕೆ, ಬೆಂಗಾಲ್‌ ಮತ್ತು ಯು ಮುಂಬಾ ರಾತ್ರಿ 9ಕ್ಕೆ