ಸಾರಾಂಶ
10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ದಬಾಂಗ್ ಡೆಲ್ಲಿಗೆ ಟೂರ್ನಿಯಲ್ಲಿ 9ನೇ ಜಯ ಸಿಕ್ಕಿದೆ. ಹರ್ಯಾಣ ಸ್ಟೀಲರ್ಸ್ ವಿರುದ್ಧದ ಪಂದ್ಯದಲ್ಲಿ ರೋಚಕ ಜಯ ದಾಖಲಿಸಿದೆ. ಹೈದರಾಬಾದ್: 10ನೇ ಆವೃತ್ತಿ ಪ್ರೊ ಕಬಡ್ಡಿಯಲ್ಲಿ ಮಾಜಿ ಚಾಂಪಿಯನ್ ದಬಾಂಗ್ ಡೆಲ್ಲಿ 9ನೇ ಗೆಲುವು ದಾಖಲಿಸಿದೆ. ಬುಧವಾರ ಹರ್ಯಾಣ ಸ್ಟೀಲರ್ಸ್ ವಿರುದ್ಧ ಡೆಲ್ಲಿಗೆ 35-32 ಅಂಕಗಳ ರೋಚಕ ಜಯ ಲಭಿಸಿತು. ಆರಂಭದಿಂದಲೇ ಎದುರಾಳಿ ಮೇಲೆ ಹಿಡಿತ ಸಾಧಿಸಿದ್ದ ಡೆಲ್ಲಿ ಕೊನೆವರೆಗೂ ಪಂದ್ಯ ಕೈ ಜಾರದಂತೆ ನೋಡಿಕೊಂಡಿತು. ಆಶು ಮಲಿಕ್ 14 ಅಂಕಗಳೊಂದಿಗೆ ಮತ್ತೆ ಡೆಲ್ಲಿಗೆ ಆಸರೆಯಾದರು. ಹರ್ಯಾಣದ ಸಿದ್ಧಾರ್ಥ್ ದೇಸಾಯಿ(11 ಅಂಕ) ಹೋರಾಟ ಫಲ ನೀಡಲಿಲ್ಲ.ದಿನದ ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ ತಮಿಳ್ ತಲೈವಾಸ್ 54-29 ಅಂಕಗಳಲ್ಲಿ ಗೆಲುವು ಸಾಧಿಸಿತು.ನಾಳಿನ ಪಂದ್ಯಗಳುಪಾಟ್ನಾ-ಬೆಂಗಾಲ್, ರಾತ್ರಿ 8ಕ್ಕೆಗುಜರಾತ್-ಮುಂಬಾ, ರಾತ್ರಿ 9ಕ್ಕೆ
ಯೂತ್ ಗೇಮ್ಸ್: ಮತ್ತೆ 2 ಪದಕ ಗೆದ್ದ ಕರ್ನಾಟಕಚೆನ್ನೈ: ಇಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಮತ್ತೆರಡು ಪದಕ ಗೆದ್ದಿದ್ದಾರೆ. ಅಂಡರ್-15 ಬಾಲಕರ ಹ್ಯಾಮರ್ ಎಸೆತದಲ್ಲಿ ಯಶಸ್ ಕುರ್ಬಾರ್ 64.12 ಮೀ. ದೂರ ದಾಖಲಿಸಿ ಬೆಳ್ಳಿ ತಮ್ಮದಾಗಿಸಿಕೊಂಡರು. ಬಾಲಕಿಯರ 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಿಯಾಂಕಾ ಓಲೇಕಾರ್ 2 ನಿಮಿಷ 12.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.