ಗುಜರಾತ್‌ ಟೈಟಾನ್ಸ್‌ ಸವಾಲಿಗೆ ಕಿಂಗ್ಸ್‌ ಪಂಜಾಬ್‌ ಸಜ್ಜು

| Published : Apr 04 2024, 01:05 AM IST / Updated: Apr 04 2024, 04:48 AM IST

ಗುಜರಾತ್‌ ಟೈಟಾನ್ಸ್‌ ಸವಾಲಿಗೆ ಕಿಂಗ್ಸ್‌ ಪಂಜಾಬ್‌ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಹ್ಯಾಟ್ರಿಕ್‌ ಸೋಲು ತಪ್ಪಿಸುತ್ತಾ ಧವನ್ ನಾಯಕತ್ವದ ಪಂಜಾಬ್‌?. ತಂಡ 3 ಪಂದ್ಯಗಳಲ್ಲಿ ಒಮ್ಮೆಯೂ 180ರ ಗಡಿ ದಾಟಿಲ್ಲ. ಧವನ್‌ ಲಯದಲ್ಲಿದರೂ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ.

ಅಹಮದಾಬಾದ್‌: ಬ್ಯಾಟಿಂಗ್‌ ವೈಫಲ್ಯ, ಡೆತ್‌ ಓವರ್‌ಗಳಲ್ಲಿ ಬೌಲರ್‌ಗಳ ಕಳಪೆ ಪ್ರದರ್ಶನದಿಂದಾಗಿ ಸತತ 2 ಪಂದ್ಯ ಗಳಲ್ಲಿ ಸೋತಿರುವ ಪಂಜಾಬ್‌ ಕಿಂಗ್ಸ್‌ ಹ್ಯಾಟ್ರಿಕ್‌ ಸೋಲು ತಪ್ಪಿಸಿ ಗೆಲುವಿನ ಹಳಿಗೆ ಮರಳುವ ಕಾತರದಲ್ಲಿದ್ದು, ಗುರುವಾರ ಗುಜರಾತ್‌ ಟೈಟಾನ್ಸ್‌ ವಿರುದ್ಧ ಸೆಣಸಾಡಲಿದೆ. ಆದರೆ ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ನ ಸ್ಫೋಟಕ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದ ಟೈಟಾನ್ಸ್‌ ವಿರುದ್ಧ ಪಂಜಾಬ್‌ ಯಾವ ರೀತಿ ಪ್ರದರ್ಶನ ನೀಡಲಿದೆ ಎಂಬ ಕುತೂಹಲವಿದೆ. 

ಪಂಜಾಬ್‌ 3 ಪಂದ್ಯಗಳಲ್ಲಿ ಒಮ್ಮೆಯೂ 180ರ ಗಡಿ ದಾಟಿಲ್ಲ. ಧವನ್‌ ಲಯದಲ್ಲಿದರೂ ಸ್ಟ್ರೈಕ್‌ರೇಟ್‌ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ. ಇತರ ಬ್ಯಾಟರ್‌ಗಳು ಸ್ಥಿರತೆ ಕಾಯ್ದುಕೊಳ್ಳಬೇಕಿದ್ದು, ಕರ್ರನ್‌, ಬೇರ್‌ಸ್ಟೋವ್‌, ಜಿತೇಶ್‌ ಶರ್ಮಾ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಗಾಯಾಳು ಲಿವಿಂಗ್‌ಸ್ಟೋನ್‌ ಅಲಭ್ಯರಾದರೆ ತಂಡಕ್ಕೆ ಹಿನ್ನಡೆಯುಂಟಾಗುವ ಸಾಧ್ಯತೆ ಹೆಚ್ಚು.ಅತ್ತ ಗುಜರಾತ್‌ನ ಬ್ಯಾಟಿಂಗ್‌ ಕೂಡಾ ಸಪ್ಪೆಯಾಗಿದೆ. ತಂಡದ ಯಾರಿಂದಲೂ ಈ ಬಾರಿ ಅರ್ಧಶತಕ ದಾಖಲಾಗಿಲ್ಲ. ಅನುಭವಿಗಳಾದ ಮೋಹಿತ್, ಉಮೇಶ್‌ ಮೊನಚು ದಾಳಿ ಸಂಘಟಿಸಬೇಕಿದ್ದು, ರಶೀದ್‌, ಅಜ್ಮತುಲ್ಲಾರ ಆಲ್ರೌಂಡರ್‌ ಆಟ ನಿರ್ಣಾಯಕ.ಒಟ್ಟು ಮುಖಾಮುಖಿ: 03ಗುಜರಾತ್‌: 02ಪಂಜಾಬ್‌: 01

ಸಂಭವನೀಯ ಆಟಗಾರರ ಪಟ್ಟಿ

ಗುಜರಾತ್‌: ಸಾಹ, ಗಿಲ್(ನಾಯಕ), ಅಜ್ಮತುಲ್ಲಾ, ಮಿಲ್ಲರ್‌, ಶಂಕರ್‌, ತೆವಾಟಿಯಾ, ರಶೀದ್‌, ಉಮೇಶ್‌, ನೂರ್‌ ಅಹ್ಮದ್‌, ಮೋಹಿತ್‌, ದರ್ಶನ್‌.

ಪಂಜಾಬ್‌: ಧವನ್‌(ನಾಯಕ), ಬೇರ್‌ಸ್ಟೋವ್‌, ಲಿವಿಂಗ್‌ಸ್ಟೋನ್‌, ಕರ್ರನ್‌, ಜಿತೇಶ್‌, ಶಶಾಂಕ್‌, ಹರ್‌ಪ್ರೀತ್‌, ಹರ್ಷಲ್‌, ರಬಾಡ, ಚಹರ್‌, ಅರ್ಶ್‌ದೀಪ್‌

ಪಂದ್ಯ ಆರಂಭ: ರಾತ್ರಿ 7.30ಕ್ಕೆ, ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌, ಜಿಯೋ ಸಿನಿಮಾ.