ರಣಜಿ: ಹುಬ್ಬಳ್ಳಿಯಲ್ಲಿ ಇಂದಿನಿಂದ ಕರ್ನಾಟಕ vs ಚಂಡೀಗಢ ಫೈಟ್‌

| Published : Feb 16 2024, 01:48 AM IST

ಸಾರಾಂಶ

ದಶಕಗಳ ಬಳಿಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಈ ಬಾರಿ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ಕರ್ನಾಟಕ ಸದ್ಯ ಮಾಡು ಇಲ್ಲವೇ ಮಡಿ ಘಟ್ಟದಲ್ಲಿದೆ. ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೇರುವ ಕಾತರದಲ್ಲಿರುವ ರಾಜ್ಯ ತಂಡಕ್ಕೆ ಶುಕ್ರವಾರದಿಂದ ಚಂಡೀಗಢ ಸವಾಲು ಎದುರಾಗಲಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿದಶಕಗಳ ಬಳಿಕ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಈ ಬಾರಿ ರಣಜಿ ಟ್ರೋಫಿಯಲ್ಲಿ ಕಣಕ್ಕಿಳಿದಿರುವ ಕರ್ನಾಟಕ ಸದ್ಯ ಮಾಡು ಇಲ್ಲವೇ ಮಡಿ ಘಟ್ಟದಲ್ಲಿದೆ. ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೇರುವ ಕಾತರದಲ್ಲಿರುವ ರಾಜ್ಯ ತಂಡಕ್ಕೆ ಶುಕ್ರವಾರದಿಂದ ಚಂಡೀಗಢ ಸವಾಲು ಎದುರಾಗಲಿದ್ದು, ನಾಕೌಟ್‌ಗೇರಲು ಗೆಲುವು ಅನಿವಾರ್ಯ. ಪಂದ್ಯಕ್ಕೆ ಹುಬ್ಬಳ್ಳಿ ಕೆಎಸ್‌ಸಿಎ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಮಯಾಂಕ್ ಅಗರ್‌ವಾಲ್‌ ನಾಯಕತ್ವದ ರಾಜ್ಯ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಆಡಿರುವ 6 ಪಂದ್ಯಗಳಲ್ಲಿ 3ರಲ್ಲಿ ಗೆದ್ದಿದ್ದು, 1ರಲ್ಲಿ ಸೋತು, 2ರಲ್ಲಿ ಡ್ರಾ ಸಾಧಿಸಿದೆ. ತಂಡ ಸದ್ಯ 24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ತಂಡ ಈ ಪಂದ್ಯದಲ್ಲಿ ಗೆದ್ದರೆ ಗುಂಪಿನಲ್ಲಿ ಅಗ್ರಸ್ಥಾನಿಯಾಗಿಯೇ ನಾಕೌಟ್‌ ಹಂತ ಪ್ರವೇಶಿಸಲಿದೆ. ತಂಡಕ್ಕೆ ನಾಕೌಟ್‌ಗೇರಬೇಕಿದ್ದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಸಾಧಿಸಿದರೂ ಸಾಕು. ಒಂದು ವೇಳೆ ಸೋತರೆ ಆಗ ತಂಡದ ಭವಿಷ್ಯ ಇತರ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ತಮಿಳುನಾಡು 22, ಗುಜರಾತ್‌ 19, ರೈಲ್ವೇಸ್‌ 18, ತ್ರಿಪುರಾ 17 ಅಂಕ ಹೊಂದಿದ್ದು, ಈ ಎಲ್ಲಾ ತಂಡಗಳಿಗೂ ಕ್ವಾರ್ಟರ್‌ಗೇರುವ ಅವಕಾಶ ಇರುವ ಕಾರಣ ರಾಜ್ಯ ತಂಡ ಗೆಲ್ಲುವುದು ಅನಿವಾರ್ಯ.ಮತ್ತೊಂದೆಡೆ ಚಂಡೀಗಢ ಆಡಿರುವ 6 ಪಂದ್ಯಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. 1 ಪಂದ್ಯ ಸೋತು, 5ರಲ್ಲಿ ಡ್ರಾ ಸಾಧಿಸಿರುವ ತಂಡ 5 ಅಂಕದೊಂದಿಗೆ ಗುಂಪಿನಲ್ಲಿ 7ನೇ ಸ್ಥಾನದಲ್ಲಿದೆ.ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ