ರಣಜಿ: ಕರ್ನಾಟಕಕ್ಕೆ ಮಯಾಂಕ್‌, ದೇದವತ್‌ ಶತಕದಾಸರೆ

| Published : Jan 21 2024, 01:37 AM IST

ರಣಜಿ: ಕರ್ನಾಟಕಕ್ಕೆ ಮಯಾಂಕ್‌, ದೇದವತ್‌ ಶತಕದಾಸರೆ
Share this Article
  • FB
  • TW
  • Linkdin
  • Email

ಸಾರಾಂಶ

ರಣಜಿ ಟ್ರೋಫಿ ಪಂದ್ಯದಲ್ಲಿ ಗೋವಾ ಮೊದಲ ಇನ್ನಿಂಗ್ಸ್‌ 321/10 ಆಗಿದೆ. ಕರ್ನಾಟಕ 2ನೇ ದಿನ 4 ವಿಕೆಟ್‌ ಕಳೆದುಕೊಂಡು 253 ರನ್‌ ಗಳಿಸಿದ್ದು, 68 ರನ್‌ ಹಿನ್ನಡೆಯಲ್ಲಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮತ್ತೆ ಅವಕಾಶಕ್ಕಾಗಿ ಭಾರತ ತಂಡದ ಕದ ತಟ್ಟುತ್ತಿರುವ ಮಯಾಂಕ್‌ ಅಗರ್‌ವಾಲ್‌ ಹಾಗೂ ದೇವದತ್‌ ಪಡಿಕ್ಕಲ್‌ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಮತ್ತೊಮ್ಮೆ ಆಕರ್ಷಕ ಶತಕದ ಮೂಲಕ ಕರ್ನಾಟಕ ತಂಡಕ್ಕೆ ಆಸರೆಯಾಗಿದ್ದಾರೆ. ಗೋವಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಕರ್ನಾಟಕ 2ನೇ ದಿನದಂತ್ಯಕ್ಕೆ 4 ವಿಕೆಟ್‌ಗೆ 253 ರನ್ ಗಳಿಸಿದ್ದು. ಇನ್ನೂ 68 ರನ್‌ ಹಿನ್ನಡೆಯಲ್ಲಿದೆ.ಮೊದಲ ದಿನ 8 ವಿಕೆಟ್‌ಗೆ 226 ರನ್‌ ಗಳಿಸಿದ್ದ ಗೋವಾ, ಶನಿವಾರ ತೀವ್ರ ಹೋರಾಟ ಪ್ರದರ್ಶಿಸಿತು. 9ನೇ ವಿಕೆಟ್ ಅರ್ಜುನ್‌ ತೆಂಡುಲ್ಕರ್‌(52) ಹಾಗೂ ಹೇರಂಬ್‌ ಪರಬ್‌(53) 93 ರನ್‌ ಜೊತೆಯಾಟವಾಡಿ, ತಂಡವನ್ನು 300ರ ಗಡಿ ದಾಟಿಸಿದರು. ವೆಂಕಟೇಶ್‌ 3 ವಿಕೆಟ್‌ ಕಿತ್ತರು.ಬಳಿಕ ಇನ್ನಿಂಗ್ಸ್ ಆರಂಭಿಸಿದ ರಾಜ್ಯ ತಂಡ ನಿಶ್ಚಲ್‌(16) ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆದರೆ ಮಯಾಂಕ್‌(104) ಹಾಗೂ ಪಡಿಕ್ಕಲ್‌(103) 2ನೇ ವಿಕೆಟ್‌ಗೆ 298 ಎಸೆತಗಳಲ್ಲಿ 211 ರನ್‌ ಜೊತೆಯಾಟವಾಡಿ ತಂಡಕ್ಕೆ ಚೇತರಿಕೆ ನೀಡಿದರು. ಆದರೆ ಕೊನೆ ಅವಧಿಯಲ್ಲಿ ಇವರಿಬ್ಬರ ವಿಕೆಟ್‌ ಕಳೆದುಕೊಂಡ ಕರ್ನಾಟಕ, ಮತ್ತೆ ಕುಸಿತಕ್ಕೊಳಗಾಯಿತು. ಸ್ಪಿನ್ನರ್‌ ರೋಹಿತ್‌(02) ಕೂಡಾ ಪೆವಿಲಿಯನ್‌ಗೆ ಮರಳಿದ್ದು, ನಿಕಿನ್‌ ಜೋಸ್‌(03), ಶ್ರೀನಿವಾಸ್(00) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

ಸ್ಕೋರ್‌: ಗೋವಾ 321/10(ಹೇರಂಬ್‌ 53, ಅರ್ಜುನ್‌ 52, ವೆಂಕಟೇಶ್‌ 3-41), ಕರ್ನಾಟಕ 253/4(2ನೇ ದಿನದಂತ್ಯಕ್ಕೆ) (ಮಯಾಂಕ್‌ 114, ಪಡಿಕ್ಕಲ್‌ 103, ಮೋಹಿತ್‌ 2-65).02ನೇ ಶತಕಮಯಾಂಕ್‌ ಹಾಗೂ ಪಡಿಕ್ಕಲ್‌ ಇಬ್ಬರೂ ಈ ಬಾರಿ ಟೂರ್ನಿಯಲ್ಲಿ 2ನೇ ಶತಕ ಪೂರ್ತಿಗೊಳಿಸಿದರು. ಪಡಿಕ್ಕಲ್‌ ಪಂಜಾಬ್ ವಿರುದ್ಧ, ಮಯಾಂಕ್‌ ಗುಜರಾತ್‌ ವಿರುದ್ಧ ಶತಕ ಬಾರಿಸಿದ್ದರು.