ರಣಜಿಯ ಮೊದಲ 2 ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ: ಮಯಾಂಗ್‌ ಅಗರ್‌ವಾಲ್‌ ಸಾರಥ್ಯ

| Published : Oct 02 2024, 01:00 AM IST

ಸಾರಾಂಶ

16 ಸದಸ್ಯರ ತಂಡಕ್ಕೆ ಮನೀಶ್‌ ಪಾಂಡೆಯನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಕೆಲ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು2024-25ರ ರಣಜಿ ಟ್ರೋಫಿಯ ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡವನ್ನು ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಪ್ರಕಟಿಸಿದೆ. 16 ಸದಸ್ಯರ ತಂಡಕ್ಕೆ ಮಯಾಂಕ್‌ ಅಗರ್‌ವಾಲ್‌ ನಾಯಕರಾಗಿದ್ದು, ಮನೀಶ್‌ ಪಾಂಡೆಯನ್ನು ಉಪನಾಯಕನನ್ನಾಗಿ ನೇಮಿಸಲಾಗಿದೆ. ಕೆಲ ಯುವ ಪ್ರತಿಭೆಗಳಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ. ಅ.11ರಿಂದ 14ರ ವರೆಗೂ ಮಧ್ಯಪ್ರದೇಶ ವಿರುದ್ಧ ಇಂದೋರ್‌ನಲ್ಲಿ, ಅ.18ರಿಂದ 21ರ ವರೆಗೂ ಕೇರಳ ವಿರುದ್ಧ ಬೆಂಗಳೂರಲ್ಲಿ ರಾಜ್ಯ ತಂಡ ಮೊದಲೆರಡು ಪಂದ್ಯಗಳನ್ನಾಡಲಿದೆ.

ತಂಡ: ಮಯಾಂಕ್‌ ಅಗರ್‌ವಾಲ್‌ (ನಾಯಕ), ನಿಕಿನ್‌ ಜೋಸ್‌, ದೇವದತ್‌ ಪಡಿಕ್ಕಲ್‌, ಸ್ಮರಣ್‌ ಆರ್‌., ಮನೀಶ್‌ ಪಾಂಡೆ (ಉಪನಾಯಕ), ಶ್ರೇಯಸ್‌ ಗೋಪಾಲ್‌, ಸುಜಯ್‌ ಸತೇರಿ (ವಿಕೆಟ್‌ ಕೀಪರ್‌), ಹಾರ್ದಿಕ್‌ ರಾಜ್‌, ವೈಶಾಖ್‌ ವಿಜಯ್‌ಕುಮಾರ್‌, ಪ್ರಸಿದ್ಧ್‌ ಕೃಷ್ಣ, ವಾಸುಕಿ ಕೌಶಿಕ್‌, ಲುವ್ನಿತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌), ಮೊಹ್ಸಿನ್‌ ಖಾನ್‌, ವಿದ್ಯಾಧರ್‌ ಪಾಟೀಲ್‌, ಕಿಶನ್‌ ಬೆಡಾರೆ, ಅಭಿಲಾಶ್‌ ಶೆಟ್ಟಿ.ಬೆಂಗಳೂರು ಎಫ್‌ಸಿಗೆ ಇಂದು ಮುಂಬೈ ಸವಾಲು

ಮುಂಬೈ: ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ಸಾಧಿಸಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿಗೆ ಬುಧವಾರ ಬಲಿಷ್ಠ ಮುಂಬೈ ಎಫ್‌ಸಿ ಸವಾಲು ಎದುರಾಗಲಿದೆ. ಆರಂಭಿಕ ಮೂರೂ ಪಂದ್ಯಗಳನ್ನು ತವರಿನಲ್ಲಿ ಆಡಿರುವ ಬಿಎಫ್‌ಸಿ, ಮೊದಲ ಬಾರಿ ತವರಿನಾಚೆ ಕಣಕ್ಕಿಳಿಯಲಿದೆ. ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ ತಂಡ ಈಸ್ಟ್‌ಬೆಂಗಾಲ್‌, ಹೈದರಾಬಾದ್‌, ಮೋಹನ್‌ ಬಗಾನ್‌ ವಿರುದ್ಧ ಗೆದ್ದು 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಮುಂಬೈ 2 ಪಂದ್ಯಗಳಲ್ಲಿ ಕೇವಲ 1 ಅಂಕ ಗಳಿಸಿದ್ದು, 11ನೇ ಸ್ಥಾನದಲ್ಲಿದೆ. ಉಭಯ ತಂಡಗಳು ಈ ವರೆಗೂ 16 ಬಾರಿ ಮುಖಾಮುಖಿಯಾಗಿದ್ದು, ಮುಂಬೈ 8ರಲ್ಲಿ, ಬಿಎಫ್‌ಸಿ 7ರಲ್ಲಿ ಗೆದ್ದಿವೆ. ಒಂದು ಪಂದ್ಯ ಡ್ರಾಗೊಂಡಿದೆ.ಪಂದ್ಯ: ಸಂಜೆ 7.30ಕ್ಕೆ