ಅತಿಹೆಚ್ಚು ಟೆಸ್ಟ್‌ ವಿಕೆಟ್‌ ಕಿತ್ತ ಭಾರತೀಯ : ಜಡೇಜಾ ನಂ.5 - 77 ಟೆಸ್ಟ್‌ಗಳಲ್ಲಿ 314 ವಿಕೆಟ್‌

| Published : Nov 02 2024, 01:15 AM IST / Updated: Nov 02 2024, 04:32 AM IST

ಸಾರಾಂಶ

77 ಟೆಸ್ಟ್‌ಗಳಲ್ಲಿ 314 ವಿಕೆಟ್‌. ತಲಾ 311 ವಿಕೆಟ್‌ ಕಬಳಿಸಿರುವ ಜಹೀರ್‌ ಖಾನ್‌, ಇಶಾಂತ್‌ ಶರ್ಮಾರನ್ನು ಹಿಂದಿಕ್ಕಿದ ಎಡಗೈ ಸ್ಪಿನ್ನರ್‌.

ಮುಂಬೈ: ನ್ಯೂಜಿಲೆಂಡ್‌ ವಿರುದ್ಧದ 3ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತ ರವೀಂದ್ರ ಜಡೇಜಾ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿಹೆಚ್ಚು ವಿಕೆಟ್ ಕಬಳಿಸಿದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. 77 ಟೆಸ್ಟ್‌ಗಳಲ್ಲಿ 314 ವಿಕೆಟ್‌ ಪಡೆದಿರುವ ಜಡೇಜಾ, ತಲಾ 311 ವಿಕೆಟ್‌ ಕಿತ್ತಿರುವ ಮಾಜಿ ವೇಗಿಗಳಾದ ಜಹೀರ್‌ ಖಾನ್‌ ಹಾಗೂ ಇಶಾಂತ್‌ ಶರ್ಮಾ ಅವರನ್ನು ಹಿಂದಿಕ್ಕಿದರು. ಭಾರತ ಪರ ಅತಿಹೆಚ್ಚು ವಿಕೆಟ್

ಆಟಗಾರಟೆಸ್ಟ್‌ವಿಕೆಟ್‌

ಅನಿಲ್‌ ಕುಂಬ್ಳೆ132619

ಆರ್‌.ಅಶ್ವಿನ್‌105533

ಕಪಿಲ್‌ ದೇವ್‌131434

ಹರ್ಭಜನ್‌ ಸಿಂಗ್‌103417

ರವೀಂದ್ರ ಜಡೇಜಾ77314