ದಕ್ಷಿಣ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌: ರಾಜ್ಯದ ಸುಧೀಕ್ಷಾಗೆ ಬೆಳ್ಳಿ, ಬೋಪಣ್ಣಗೆ ಕಂಚು

| Published : Sep 12 2024, 01:52 AM IST / Updated: Sep 12 2024, 04:28 AM IST

ದಕ್ಷಿಣ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌: ರಾಜ್ಯದ ಸುಧೀಕ್ಷಾಗೆ ಬೆಳ್ಳಿ, ಬೋಪಣ್ಣಗೆ ಕಂಚು
Share this Article
  • FB
  • TW
  • Linkdin
  • Email

ಸಾರಾಂಶ

ಚೆನ್ನೈನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌. ಮೊದಲ ದಿನವೇ ಭಾರತಕ್ಕೆ 9 ಪದಕ. ಕೂಟ ಇನ್ನೂ 2 ದಿನಗಳ ಕಾಲ ನಡೆಯಲಿದೆ.

ಚೆನ್ನೈ: ಇಲ್ಲಿ ಬುಧವಾರ ಆರಂಭಗೊಂಡ ದಕ್ಷಿಣ ಏಷ್ಯಾ ಕಿರಿಯರ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ 3 ಚಿನ್ನ ಸೇರಿ 9 ಪದಕ ತನ್ನದಾಗಿಸಿಕೊಂಡಿವೆ. ಕರ್ನಾಟಕದ ಇಬ್ಬರಿಗೆ ಪದಕ ಲಭಿಸಿವೆ.

 ಮಹಿಳೆಯರ 100 ಮೀ. ರೇಸ್‌ನಲ್ಲಿ ಭಾರತದ ಅಭಿನಯ ಚಿನ್ನ, ಸುಧೀಕ್ಷಾ(ಕರ್ನಾಟಕ) ಬೆಳ್ಳಿ ಪದಕ ಗೆದ್ದರು. ಪುರುಷರ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಸಿದ್ಧಾರ್ಥ್‌ ಚೌಧರಿ ಚಿನ್ನ, ಅನುರಾಗ್‌ ಸಿಂಗ್ ಬೆಳ್ಳಿ ಪಡೆದರು. 

ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಬಂಗಾರದ ಸಾಧನೆ ಮಾಡಿದರು. ಪುರುಷರ 100 ಮೀ. ರೇಸ್‌ನಲ್ಲಿ ಜಯರಾಮ್‌ ಕಂಚು, ಮಹಿಳೆಯರ 800 ಮೀ. ರೇಸ್‌ನಲ್ಲಿ ಲಕ್ಷ್ಮಿ ಪ್ರಿಯಾಗೆ ಬೆಳ್ಳಿ, ಪುರುಷರ 800 ಮೀ. ರೇಸ್‌ನಲ್ಲಿ ವಿನೋದ್‌ ಕುಮಾರ್‌ಗೆ ಬೆಳ್ಳಿ ಹಾಗೂ ಕರ್ನಾಟಕದ ಬೋಪಣ್ಣಗೆ ಕಂಚಿನ ಪದಕ ಲಭಿಸಿತು. ಕೂಟ ಇನ್ನೂ 2 ದಿನಗಳ ಕಾಲ ನಡೆಯಲಿದೆ.

ಮಲೇಷ್ಯಾ ವಿರುದ್ಧ 8-1ರಲ್ಲಿ ಗೆದ್ದ ಭಾರತ ಸೆಮಿಫೈನಲ್‌ಗೆ

ಹುಲುನ್‌ಬ್ಯುರ್‌(ಚೀನಾ): ಮಲೇಷ್ಯಾ ವಿರುದ್ಧ 8-1 ಗೋಲುಗಳ ಭರ್ಜರಿ ಗೆಲುವಿನೊಂದಿಗೆ ಹಾಲಿ ಚಾಂಪಿಯನ್‌ ಭಾರತ ತಂಡ ಈ ಬಾರಿ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದೆ. ಆರಂಭಿಕ 2 ಪಂದ್ಯಗಳಲ್ಲಿ ಚೀನಾ ಹಾಗೂ ಜಪಾನ್‌ ತಂಡಗಳನ್ನು ಸೋಲಿಸಿದ್ದ ಭಾರತಕ್ಕಿದು ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು. 3ನೇ ನಿಮಿಷದಲ್ಲೇ ಭಾರತಕ್ಕೆ ಮುನ್ನಡೆ ಒದಗಿಸಿದ ರಾಜ್‌ಕುಮಾರ್‌ ಹ್ಯಾಟ್ರಿಕ್‌ ಗೋಲು ಬಾರಿಸಿದರು.

ಅರೈಜೀತ್‌ ಸಿಂಗ್‌ 2, ಜುಗ್ರಾಜ್‌ ಸಿಂಗ್‌, ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಹಾಗೂ ಉತ್ತಮ್‌ ಸಿಂಗ್‌ ತಲಾ 1 ಗೋಲು ಬಾರಿಸಿ ಭಾರತದ ಭರ್ಜರಿ ಗೆಲುವಿಗೆ ಕೊಡುಗೆ ನೀಡಿದರು. ಮಲೇಷ್ಯಾ ಪರ 34ನೇ ನಿಮಿಷದಲ್ಲಿ ಏಕೈಕ ಗೋಲು ದಾಖಲಾಯಿತು.

6 ತಂಡಗಳಿರುವ ಟೂರ್ನಿಯಲ್ಲಿ ಸದ್ಯ ಭಾರತ 9 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, 3 ಪಂದ್ಯಗಳಲ್ಲಿ ಕೇವಲ 1 ಅಂಕ ಗಳಿಸಿರುವ ಮಲೇಷ್ಯಾ ಕೊನೆ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಭಾರತ ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ದ.ಕೊರಿಯಾ ವಿರುದ್ಧ ಸೆಣಸಾಡಲಿದ್ದು, ಕೊನೆ ಪಂದ್ಯದಲ್ಲಿ ಶನಿವಾರ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಬೇಕಿದೆ. ಲೀಗ್‌ ಹಂತದ ಮುಕ್ತಾಯಕ್ಕೆ ಅಗ್ರ-4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆ.16ಕ್ಕೆ ಸೆಮೀಸ್‌ ಪಂದ್ಯಗಳು ನಡೆಯಲಿವೆ.