ಸಾರಾಂಶ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಕರಾಟೆ ಶಾಲೆ ಓಎಕೆ ಫೆಡೆರೇಷನ್ ಆಫ್ ಇಂಡಿಯಾ ವತಿಯಿಂದ ಕನಕಪುರ ರಸ್ತೆಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನಲ್ಲಿ 26, 27 ಹಾಗೂ 28ರಿಂದ 3 ದಿನಗಳ ಕಾಲ ರಿಪಬ್ಲಿಕ್ ಡೇ ಕರಾಟೆ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ದೇಶದಾದ್ಯಂತ ಒಟ್ಟು 2000ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗಿಯಾಗಲಿದ್ದಾರೆ.ಕಾರ್ಯಕ್ರಮವನ್ನು 2019ರ ಮಿಸ್ ಜಪಾನ್ ನಾವೋ ಓಹಾರಾ ಉದ್ಘಾಟಿಸಲಿದ್ದಾರೆ. ವಿಶ್ವ ಕರಾಟೆ ಫೆಡರೇಷನ್‌ನ ಜಡ್ಜ್ ಆಗಿರುವ ಶಿವದಾಸ್, ಓಎಸ್‌ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಶಿಹಾನ್ ಸುರೇಶ್ ಕೆಣಿಚಿರಾ ಭಾಗವಹಿಸಲಿದ್ದಾರೆ.ಭಾರತದ ಅಸ್ಸಾಂ, ಬೆಂಗಾಳ್, ಕರ್ನಾಟಕ ಹಾಗೂ ವಿದೇಶಗಳ ಸ್ಪರ್ಧಿಗಳು ಈ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಲಿದ್ದಾರೆ. 120ಕ್ಕೂ ಹೆಚ್ಚು ನಿರ್ವಹಕರು ಕಾಣಿಸಿಕೊಳ್ಳಲಿದ್ದು, 6 ಕೋರ್ಟ್‌ಗಳಲ್ಲಿ ಪ್ರದರ್ಶನಗಳು ನಡೆಯಲಿವೆ. ಬೆಂಗಳೂರಿನ 30ಕ್ಕೂ ಹೆಚ್ಚು ಶಾಲಾ ಮಕ್ಕಳು ಈ ಚಾಂಪಿಯನ್‌ಶಿಪ್‌ನಲ್ಲಿ ತಮ್ಮ ಕರಾಟೆ ಕೌಶಲ್ಯ ಪ್ರದರ್ಶಿಸಲಿದ್ದಾರೆ.ಓಎಸ್ ಫೆಡರೇಷನ್ ಆಫ್ ಇಂಡಿಯಾ 1992ರಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದು, ಸತತ 31 ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಾ ಬಂದಿದೆ. ಈಗ ದೇಶದಾದ್ಯಂತ ವಿಸ್ತರಿಸಿರುವ ಒಎಸ್‌ಕೆ ಫೆಡರೇಷನ್ ಆಫ್ ಇಂಡಿಯಾ ಒಟ್ಟು 50+ ತರಬೇತಿದಾರರನ್ನು ಹೊಂದಿದೆ. ಅಲ್ಲದೆ. ಈಗಲೂ 45 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಕರಾಟೆ ಕಲಿಯುತ್ತಿದ್ದಾರೆ. ಬೆಂಗಳೂರಿನಲ್ಲೂ ಚಾಂಪಿಯನ್‌ಶಿಪ್ ನಡೆಯುತ್ತಿರುವುದು ಹಲವು ವಿದ್ಯಾರ್ಥಿಳಿಗೆ ಮುಖ್ಯ ವೇದಿಕೆಯಾಗಲಿದೆ.