ಪಂಜಾಬ್ ಕಿಂಗ್ಸ್‌ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೊಸ ಮುಖ್ಯ ಕೋಚ್

| Published : Sep 19 2024, 01:48 AM IST / Updated: Sep 19 2024, 04:41 AM IST

ಪಂಜಾಬ್ ಕಿಂಗ್ಸ್‌ಗೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೊಸ ಮುಖ್ಯ ಕೋಚ್
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಪಂಜಾಬ್ ಕಿಂಗ್ಸ್ ತಂಡವು ನಾಲ್ಕು ವರ್ಷಗಳ ಅವಧಿಗೆ ತಮ್ಮ ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಏಳು ವರ್ಷಗಳ ಕಾಲ ಕಳೆದ ನಂತರ ಪಾಂಟಿಂಗ್ ಈಗ ಪಂಜಾಬ್ ತಂಡವನ್ನು ಸೇರಿಕೊಂಡಿದ್ದಾರೆ.

ನವದೆಹಲಿ: ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್‌, ಐಪಿಎಲ್‌ನ ಪಂಜಾಬ್‌ ಕಿಂಗ್ಸ್‌ ತಂಡದ ನೂತನ ಕೋಚ್‌ ಆಗಿ ನೇಮಕಗೊಂಡಿದ್ದಾರೆ. 4 ವರ್ಷದ ಅವಧಿಗೆ ಪಾಂಟಿಂಗ್‌ರನ್ನು ನೇಮಕ ಮಾಡಿಕೊಂಡಿರುವುದಾಗಿ ಪಂಜಾಬ್‌ ತಂಡದ ಮಾಲಿಕರು ತಿಳಿಸಿದ್ದಾರೆ. 7 ವರ್ಷ ಡೆಲ್ಲಿ ಕ್ಯಾಪಿಟಲ್ಸ್‌ ತಂಡದೊಂದಿಗೆ ಇದ್ದ ಪಾಂಟಿಂಗ್‌ರನ್ನು ಇತ್ತೀಚೆಗೆ ತಂಡದ ಮಾಲಿಕರು ಕೋಚ್‌ ಹುದ್ದೆಯಿಂದ ಕೈಬಿಟ್ಟಿದ್ದರು. ಪಾಂಟಿಂಗ್‌ರ ಮಾರ್ಗದರ್ಶನದಲ್ಲಿ ಡೆಲ್ಲಿ ಚಾಂಪಿಯನ್‌ ಆಗದೆ ಇದ್ದರೂ, 2020ರಲ್ಲಿ ಫೈನಲ್‌ ಪ್ರವೇಶಿಸಿತ್ತು. ಅದಕ್ಕೂ ಮುನ್ನ ಅವರು ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

2008ರ ಉದ್ಘಾಟನಾ ಆವೃತ್ತಿಯಿಂದ ಪಂಜಾಬ್‌ ಸಹ ಒಮ್ಮೆಯೂ ಟ್ರೋಫಿ ಗೆದ್ದಿಲ್ಲ. ಕಳೆದೆರಡು ಆವೃತ್ತಿಗಳಲ್ಲಿ ಟ್ರೆವರ್‌ ಬೇಯ್ಲಿಸ್‌ ತಂಡದ ಕೋಚ್‌ ಆಗಿದ್ದರು. ಅದಕ್ಕೂ ಮುನ್ನ ಅನಿಲ್‌ ಕುಂಬ್ಳೆ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು. ಆದರೂ ತಂಡಕ್ಕೆ ಯಶಸ್ಸು ದೊರೆತಿರಲಿಲ್ಲ.

8 ಆವೃತ್ತಿಗಳಲ್ಲಿ 6ನೇ ಕೋಚ್‌!

2017ರಿಂದ 2023ರ ವರೆಗೂ ಪಂಜಾಬ್‌, 5 ಕೋಚ್‌ಗಳನ್ನು ಕಂಡಿತ್ತು. 2017ರಲ್ಲಿ ವೀರೇಂದ್ರ ಸೆಹ್ವಾಗ್, 2018ರಲ್ಲಿ ಬ್ರಾಡ್‌ ಹಾಡ್ಜ್‌, 2019ರಲ್ಲಿ ಮೈಕ್‌ ಹೆಸ್ಸನ್‌, 2020, 2021ರಲ್ಲಿ ಅನಿಲ್‌ ಕುಂಬ್ಳೆ, 2022, 2023ರಲ್ಲಿ ಟ್ರೆವರ್‌ ಬೇಯ್ಲಿಸ್‌ ಕೋಚ್‌ ಆಗಿದ್ದರು. 8 ವರ್ಷಗಳಲ್ಲಿ ಪಾಂಟಿಂಗ್‌ ತಂಡದ 6ನೇ ಕೋಚ್‌.