ಸಾರಾಂಶ
ನ್ಯೂಯಾರ್ಕ್: ಬುಧವಾರ ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ ಇನ್ನಿಂಗ್ಸಲ್ಲಿ 3 ಸಿಕ್ಸರ್ ಸಿಡಿಸಿದ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಆಟಗಾರ ಎನ್ನುವ ದಾಖಲೆಗೆ ಪಾತ್ರರಾದರು. ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ 553, ಪಾಕಿಸ್ತಾನದ ಶಾಹಿದ್ ಅಫ್ರಿದಿ 476 ಸಿಕ್ಸರ್‌ಗಳೊಂದಿಗೆ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ.ಅಂ.ರಾ.ಟಿ20ಯಲ್ಲಿ ರೋಹಿತ್ 4000 ರನ್‌ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ 52 ರನ್ ಗಳಿಸುವ ಮೂಲಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20ಯಲ್ಲಿ 4000 ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಭಾರತದ 2ನೇ ಹಾಗೂ ವಿಶ್ವದ 3ನೇ ಆಟಗಾರ ಎನ್ನುವ ಹಿರಿಮೆಗೆ ಪಾತ್ರರಾದರು. ರೋಹಿತ್ 152 ಪಂದ್ಯಗಳಲ್ಲಿ 4020 ರನ್ ಗಳಿಸಿದ್ದಾರೆ. 118 ಪಂದ್ಯಗಳಲ್ಲ 4038 ರನ್ ಗಳಿಸಿರುವ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದರೆ, 119 ಪಂದ್ಯಗಳಲ್ಲಿ 4023 ರನ್ ಗಳಿಸಿರುವ ಪಾಕಿಸ್ತಾನದ ಬಾಬರ್ ಆಜಂ 2ನೇ ಸ್ಥಾನದಲ್ಲಿದ್ದಾರೆ.ಜೂ.9ಕ್ಕೆ ಪಾಕ್ ವಿರುದ್ಧ ಭಾರತಕ್ಕೆ ಮುಂದಿನ ಪಂದ್ಯ
ಭಾರತ ಗುಂಪು ಹಂತದ ತನ್ನ 2ನೇ ಪಂದ್ಯವನ್ನು ಜೂ.9ರಂದು ಬದ್ಧವೈರಿ ಪಾಕಿಸ್ತಾನ ವಿರುದ್ಧ ಆಡಲಿದೆ. ಆ ಪಂದ್ಯ ಸಹ ನ್ಯೂಯಾರ್ಕ್‌ನಲ್ಲೇ ನಡೆಯಲಿದೆ. ಕ್ರೀಡಾಂಗಣ ಮುಕ್ಕಾಲು ಭಾಗ ಭರ್ತಿ, ಟಿಕೆಟ್ ದರಕ್ಕೆ ಆಕ್ಷೇಪ!ನ್ಯೂಯಾರ್ಕ್‌ನ ನಾಸೌ ಕ್ರೀಡಾಂಗಣ ಬುಧವಾರ ಮುಕ್ಕಾಲು ಭಾಗ ಭರ್ತಿಯಾಗಿತ್ತು. 35000 ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ ಸುಮಾರು 22000-23000 ಪ್ರೇಕ್ಷಕರಿದ್ದರು. ದುಬಾರಿ ಮೊತ್ತದ ಸ್ಯಾಂಡ್‌ಗಳು ಖಾಲಿ ಇದ್ದವು. ಸಾಮಾಜಿಕ ತಾಣಗಳಲ್ಲಿ ಭಾರತದ ಪಂದ್ಯಗಳ ಟಿಕೆಟ್ ದರದ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಐರ್ಲೆಂಡ್ ವಿರುದ್ಧದ ಪಂದ್ಯದ ಟಿಕೆಟ್‌ಗೇ ಸರಾಸರಿ 800-1000 ಅಮೆರಿಕನ್ ಡಾಲರ್ (₹66000-₹83000) ದರ ಇತ್ತು ಎಂದು ಅನೇಕರು ಟ್ವೀಟರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.01 ರನ್: ಕೊಹ್ಲಿ ಈ ಪಂದ್ಯದಲ್ಲಿ ಕೇವಲ 1 ರನ್‌ಗೆ ಔಟಾದರು. ಟಿ20 ವಿಶ್ವಕಪ್‌ನಲ್ಲಿ ಇದು ಕೊಹ್ಲಿ ಗಳಿಸಿದ ಕನಿಷ್ಠ ಮೊತ್ತ. 08 ಜಯ: ಐರ್ಲೆಂಡ್ ವಿರುದ್ಧ ಟಿ20ಯಲ್ಲಿ ಭಾರತಕ್ಕೆ 8ನೇ ಗೆಲುವು. ಆಡಿರುವ ಎಲ್ಲಾ 8 ಪಂದ್ಯಗಳಲ್ಲಿ ಭಾರತ ಗೆದ್ದಿದೆ.